ರಾಜ್ಯ ಮಟ್ಟದ ಚೆಸ್‌ ಪಂದ್ಯಾವಳಿ

7
ಬೇಲೂರಲ್ಲಿ ಆಯೋಜನೆ: 300 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ

ರಾಜ್ಯ ಮಟ್ಟದ ಚೆಸ್‌ ಪಂದ್ಯಾವಳಿ

Published:
Updated:
Deccan Herald

ಹಾಸನ: ವೇಲಾಪುರಿ ಚೆಸ್ ಸಂಸ್ಥೆ ವತಿಯಿಂದ ಆ.11 ಮತ್ತು 12ರಂದು ರಾಜ್ಯ ಮಟ್ಟದ ಓಪನ್ ರ್‍ಯಾಪಿಡ್ ಚೆಸ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಕಾರ್ಯದರ್ಶಿ ಟಿ.ಎನ್.ಚಂದ್ರಶೇಖರ್ ತಿಳಿಸಿದರು.

ವೇಲಾಪುರಿ ಚೆಸ್ ಸಂಸ್ಥೆ ಹಾಗೂ ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆ ಆಶ್ರಯದಲ್ಲಿ ಬೇಲೂರು ಪಟ್ಟಣದ ಸುಧಾನ್ವ ಗೌಡ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆಯುವ ಪಂದ್ಯಾವಳಿಗೆ ಶಾಸಕ ಕೆ.ಎಸ್.ಲಿಂಗೇಶ್, ಗ್ರಾಂಡ್ ಮಾಸ್ಟರ್ ತೇಜ್ ಕುಮಾರ್ ಚಾಲನೆ ನೀಡುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಥಮ ಬಹುಮಾನ ₹ 15 ಸಾವಿರ, ದ್ವಿತೀಯ ₹ 11 ಸಾವಿರ, ತೃತೀಯ ₹ 8 ಸಾವಿರ, 4ನೇ ಸ್ಥಾನಕ್ಕೆ ₹ 6 ಸಾವಿರ ಮತ್ತು 5ನೇ ಸ್ಥಾನಕ್ಕೆ ₹ 5 ಸಾವಿರ ಬಹುಮಾನ ನೀಡಲಾಗುತ್ತದೆ. ಅತ್ಯುತ್ತಮ ಪ್ರದರ್ಶನ ನೀಡುವ
ಕ್ರೀಡಾಪಟುಗೆ `ಚದುರಂಗ ವಿಷ್ಣುವರ್ಧನ' ಎಂಬ ಬಿರುದು ನೀಡಲಾಗುವುದು ಎಂದರು.

ಪಂದ್ಯಾವಳಿಯಲ್ಲಿ ಸುಮಾರು 300 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದ್ದು, ಪ್ರವೇಶ ಶುಲ್ಕ ₹ 750. ಪ್ರವೇಶ ಶುಲ್ಕವನ್ನು ಎನ್ಇಎಫ್ ಟಿ -ಆರ್ ಟಿಜಿಎಸ್ ಮೂಲಕ ಟಿ.ಎನ್.ಚಂದ್ರಶೇಖರ್, ಖಾತೆ
ನಂ.154701011000118, ಐಎಫ್ಎಸ್ ಸಿ ನಂ. ವಿಐಜೆಬಿ0001547, ಬೇಲೂರು ಶಾಖೆ, ವಿಜಯಬ್ಯಾಂಕ್ ಗೆ ಪಾವತಿ ಮಾಡಬಹುದಾಗಿದೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಜಂಟಿ ಕಾರ್ಯದರ್ಶಿ ಎಂ.ಜೆ.ಕೃಷ್ಣಮೂರ್ತಿ, ತರಬೇತುದಾರ ತ್ಯಾಗರಾಜ್, ನಿರ್ದೇಶಕರಾದ ವೆಂಕಟೇಶ್, ವಿಶ್ವನಾಥ್ ಇದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !