ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಂಟಿ ಕೋರೆ ಆನೆ ಸೆರೆ, ಸ್ಥಳಾಂತರ

Published 28 ನವೆಂಬರ್ 2023, 14:52 IST
Last Updated 28 ನವೆಂಬರ್ 2023, 14:52 IST
ಅಕ್ಷರ ಗಾತ್ರ

ಬೇಲೂರು: ಅರಣ್ಯ ವಿಭಾಗದ ಆಲೂರು, ಬೇಲೂರು, ಸಕಲೇಶಪುರ ಮತ್ತು ಯಸಳೂರು ವಲಯಗಳ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳಿಗೆ ರೆಡಿಯೊ ಕಾಲರ್ ಅಳವಡಿಸುವ ಮತ್ತು ಸೆರೆಹಿಡಿದು ಸ್ಥಳಾಂತರಿಸುವ ಕಾರ್ಯಾಚರಣೆಯ 5 ನೇ ದಿನವಾದ ಮಂಗಳವಾರ ಮುಂದುವರಿಯಿತು.

ಬೇಲೂರು ತಾಲ್ಲೂಕು ಅರೇಹಳ್ಳಿ ಶಾಖೆಯ ದೊಡ್ಡ ಉಡುವೆ ಎಸ್ಟೇಟ್ ಬಳಿ ಹೊಳವು ಜೈದೀಪ್ ಅವರ ತೋಟದಲ್ಲಿ ಒಂಟಿ ಕೋರೆಯ ಗಂಡಾನೆ ಸೆರೆ ಹಿಡಿಯಲಾಗಿದ್ದು, ಸ್ಥಳಾಂತರಿಸಲಾಯಿತು.

ಕಾರ್ಯಾಚರಣೆಯಲ್ಲಿ ಹಾಸನ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಆರ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮೋಹನ್‍ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಭುಗೌಡ ಬಿರಾದಾರ, ಎಸ್.ಪಿ.ಮಹದೇವ್ ಮತ್ತು ವಲಯ ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು.

5 ದಿನಗಳಲ್ಲಿ ಒಟ್ಟು 03 ಕಾಡಾನೆಗಳಿಗೆ ರೆಡಿಯೊ ಕಾಲರ್ ಅಳವಡಿಸಲಾಗಿದ್ದು, 2 ಕಾಡಾನೆಗಳನ್ನು ಸ್ಥಳಾಂತರ ಮಾಡಲಾಗಿದೆ. ಕಾರ್ಯಾಚರಣೆ ಸಂದರ್ಭದಲ್ಲಿ ಸುತ್ತಲಿನ ಪ್ರದೇಶದ ಸಾರ್ವಜನಿಕರು ಮನೆಯಿಂದ ಹೊರಬಾರದಂತೆ ಎಚ್ಚರಿಕೆಯಿಂದ ಇರಲು ಇಲಾಖೆಯ ಜೀಪ್‍ಗಳಲ್ಲಿ ಮೈಕ್ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದು ಡಿಎಫ್‌ಒ ಮೋಹನ್‌ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT