ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ಮತ್ತೆ ಇಳಿಕೆ

Published 27 ಮೇ 2024, 15:44 IST
Last Updated 27 ಮೇ 2024, 15:44 IST
ಅಕ್ಷರ ಗಾತ್ರ

ಬ್ಯಾಡಗಿ: ಇಲ್ಲಿಯ ಮೆಣಸಿನಕಾಯಿ ಮಾರುಕಟ್ಟೆಗೆ ಸೋಮವಾರ 13,790 ಚೀಲ (3,447 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಮತ್ತೆ ಇಳಿಕೆಯಾಗಿದೆ.

ಮಾರುಕಟ್ಟೆಗೆ ಕಳೆದ ಗುರುವಾರ 14,998 ಚೀಲ (3,749 ಕ್ವಿಂಟಲ್‌) ಮೆಣಸಿನಕಾಯಿ ಆವಕವಾಗಿತ್ತು. ಪ್ರಸಕ್ತ ಹಂಗಾಮು ಅಂತಿಮ ಹಂತಕ್ಕೆ ತಲುಪಿದ್ದರ ಪರಿಣಾಮ ದಿನದಿಂದ ದಿನಕ್ಕೆ ಆವಕ ಇಳಿಕೆಯತ್ತ ಸಾಗಿದೆ. ರೈತರು ಕೊನೆಯ ಬೀಡಿನ ಮೆಣಸಿನಕಾಯಿ ಮಾರಾಟಕ್ಕೆ ತರುತ್ತಿರುವುದರಿಂದ ಗುಣಮಟ್ಟದ ಕೊರತೆಯನ್ನು ಎದುರಿಸುವಂತಾಗಿದೆ. ಅಲ್ಲದೆ ಕೋಲ್ಡ್‌ ಸ್ಟೋರೇಜ್‌ಗಳಲ್ಲಿ ಸಂಗ್ರಹವಿರುವ ಮೆಣಸಿನಕಾಯಿ ಪೈಕಿ ಅಲ್ಪಸ್ವಲ್ಪ ಮಾರಾಟ ನಡೆಯುತ್ತಿದೆ.

ಪ್ರಾಂಗಣದಲ್ಲಿ ಗುರುವಾರ 2,155 ಲಾಟ್‌ ಮೆಣಸಿನಕಾಯಿ ಚೀಲಗಳನ್ನು ಟೆಂಡರ್‌ಗೆ ಇಡಲಾಗಿದ್ದು, ಈ ಪೈಕಿ ತೇವಾಂಶ ಹೆಚ್ಚಿರುವ ಹಾಗೂ ಗುಣಮಟ್ಟದ ಕೊರತೆ ಇರುವ 162 ಲಾಟ್‌ಗಳಿಗೆ ಟೆಂಡರ್ ನಮೂದಿಸಿಲ್ಲ. ಗುಣಮಟ್ಟವಿಲ್ಲದೆ ನೋ ಬಿಡ್‌ ಲಾಟ್‌ಗಳ ಸಂಖ್ಯೆ ಸಹ ಹೆಚ್ಚುತ್ತಿದೆ. ಎರಡು ಚೀಲ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹33,816ರಂತೆ, ಎರಡು ಚೀಲ ಕಡ್ಡಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹27,000ರಂತೆ ಮತ್ತು ಗುಂಟೂರು ತಳಿ ₹17,409 ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿವೆ.

ಕಳೆದ ಗುರುವಾರಕ್ಕಿಂತ ಬ್ಯಾಡಗಿ ಕಡ್ಡಿ ಮೆಣಸಿನಕಾಯಿ ಗರಿಷ್ಠ ಬೆಲೆಯಲ್ಲಿ ಕ್ವಿಂಟಲ್‌ಗೆ ₹1 ಸಾವಿರ, ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹4 ಸಾವಿರ ಇಳಕೆಯಾಗಿದೆ. ಸರಾಸರಿ ಬೆಲೆಯಲ್ಲಿ ಬ್ಯಾಡಗಿ ಡಬ್ಬಿ ₹28,269, ಬ್ಯಾಡಗಿ ಕಡ್ಡಿ ₹24,429 ಹಾಗೂ ಗುಂಟೂರ ತಳಿ ₹11,529 ರಂತೆ ಮಾರಾಟವಾಗಿದ್ದು, ತುಸು ಇಳಿಕೆ ಕಂಡಿದೆ. ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 158 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಸೋಮವಾರದ ಮಾರುಕಟ್ಟೆ ದರ(ಪ್ರತಿ ಕ್ವಿಂಟಲ್‌ಗೆ ₹ಗಳಲ್ಲಿ)
ತಳಿ;ಕನಿಷ್ಠ;ಗರಿಷ್ಠ
ಬ್ಯಾಡಗಿ ಕಡ್ಡಿ;2,329;27,000
ಬ್ಯಾಡಗಿ ಡಬ್ಬಿ ;2,869;33,816
ಗುಂಟೂರ ತಳಿ;0810;17,409

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT