ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿಆಲೂರು | ಮಹಿಳೆ, ಪುರುಷನ ಮೇಲೆ ಹಲ್ಲೆ: ಇಬ್ಬರ ಬಂಧನ

Published 10 ಜನವರಿ 2024, 16:29 IST
Last Updated 10 ಜನವರಿ 2024, 16:29 IST
ಅಕ್ಷರ ಗಾತ್ರ

ಅಕ್ಕಿಆಲೂರು (ಹಾವೇರಿ ಜಿಲ್ಲೆ): ಹೋಟೆಲ್‍ನ ಕೊಠಡಿಗೆ ಹಿಂದೂ ಪುರುಷನೊಬ್ಬ ಮುಸ್ಲಿಂ ವಿವಾಹಿತ ಮಹಿಳೆಯನ್ನು ಕರೆದೊಯ್ದಿದ್ದಕ್ಕೆ ಸಿಟ್ಟಿಗೆದ್ದು ಮುಸ್ಲಿಂ ಯುವಕರ ಗುಂಪು ದಾಂದಲೆ ಮಾಡಿ, ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ ಘಟನೆ ಹಾನಗಲ್ ತಾಲ್ಲೂಕಿನ ನಾಲ್ಕರ್ ಕ್ರಾಸ್ ಸಮೀಪ ನಡೆದಿದೆ.

‘ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನವರಾದ ಪುರುಷ ಮತ್ತು ಮಹಿಳೆ ಶನಿವಾರ ನಾಲ್ಕರ್ ಕ್ರಾಸ್ ಬಳಿ ಹೋಟೆಲ್‍ನಲ್ಲಿ ಕೊಠಡಿ ಬಾಡಿಗೆಗೆ ಪಡೆದು ತಂಗಿದ್ದರು. ಆಟೊ ಚಾಲಕನೊಬ್ಬ ನೀಡಿದ ಮಾಹಿತಿ ಮೇರೆಗೆ ಅಕ್ಕಿಆಲೂರಿನ ಐವರು ಯುವಕರು ಹೋಟೆಲ್‌ನ ಕೊಠಡಿಗೆ ನುಗ್ಗಿ, ಇಬ್ಬರನ್ನೂ ಎಳೆದಾಡಿ ಹಲ್ಲೆ ಮಾಡಿದ್ದಾರೆ. ಇದರ ವಿಡಿಯೊಗಳು ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ’ ಎಂದು ಹಾನಗಲ್ ಠಾಣೆ ಪೊಲೀಸರು ತಿಳಿಸಿದ್ದಾರೆ.

‘‍ಪ್ರಕರಣಕ್ಕೆ ಸಂಬಂಧಿಸಿದಂತೆ ಅಫ್ತಾಬ್ ಮಕ್ಬೂಲ್‍ ಅಹ್ಮದ್ ಚಂದನಕಟ್ಟಿ (24), ಮದರ್‌ಸಾಬ್‌ ಮಹ್ಮದ್‍ ಇಸಾಕ್ ಮಂಡಕ್ಕಿ (23) ಎಂಬುವರನ್ನು ಬಂಧಿಸಲಾಗಿದೆ. ಇನ್ನೂ ಮೂವರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT