ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೈನುಗಾರಿಕೆಯಿಂದ ಉತ್ತಮ ಆದಾಯ: ಶಾಸಕ ಯು.ಬಿ.ಬಣಕಾರ

Published 8 ಜನವರಿ 2024, 16:10 IST
Last Updated 8 ಜನವರಿ 2024, 16:10 IST
ಅಕ್ಷರ ಗಾತ್ರ

ಆರೀಕಟ್ಟಿ (ಹಂಸಭಾವಿ): ರೈತರು ಕೇವಲ ಕೃಷಿಯ ಮೇಲೆ ಮಾತ್ರ ಅವಲಂಭಿತರಾಗದೇ ಇದರ ಜೊತೆಗೆ ಕೃಷಿಯ ಉಪಸುಬು ಹೈನುಗಾರಿಕೆಯನ್ನು ಕೈಗೊಂಡರೆ ಹೆಚ್ಚಿನ ಆದಾಯ ಗಳಿಸಬಹುದು ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.

ಇಲ್ಲಿಗೆ ಸಮೀಪದ ಆರೀಕಟ್ಟಿಯಲ್ಲಿ ಸೋಮವಾರ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಹಾಗೂ ಹಾಲು ಉತ್ಪಾದಕ ಸಹಕಾರಿ ಸಂಘದ ಸಹಯೋಗದಲ್ಲಿ ನಡೆದ ಮಿಶ್ರತಳಿ ಹಸು ಹಾಗೂ ಎಮ್ಮೆ ಪ್ರದರ್ಶನವನ್ನು ಉದ್ಘಾಟಿಸಿ ಬಳಿಕ ಮಾತನಾಡಿದರು.

ಹಾವೇರಿ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಜೆ.ವಿ.ವಿಬಯಣ್ಣವರ ಮಾತನಾಡಿ, ರೈತರು ಮಿಶ್ರತಳಿಯ ಹಸು, ಎಮ್ಮೆಗಳನ್ನು ಸಾಕುವುದರಿಂದ ಹೆಚ್ಚಿನ ಹಾಲನ್ನು ಪಡೆಯಬಹುದು. ಹೈನುಗಾರಿಕೆ ಮಾಡುವ ಮೊದಲು ಆಯಾ ವಾತಾವರಣಕ್ಕೆ ಹೊಂದಿಕೊಳ್ಳುವ ಹಸುಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಸೂಕ್ತ ತರಬೇತಿ ಪಡೆಯಬೇಕು ಎಂದರು.

ನಂತರ ರೈತರ ಮಿಶ್ರತಳಿಯ ಹಸು ಹಾಗೂ ಎಮ್ಮೆ ಗಳ ಪ್ರದರ್ಶನ ನಡೆಯಿತು. ಉತ್ತಮ ತಳಿಯ ಜಾನುವಾರುಗಳಿಗೆ ಬಹುಮಾನಗಳನ್ನು ಹಾಗೂ ರೈತರಿಗೆ ಹೈನುಗಾರಿಕೆ ಪರಿಕರಗಳನ್ನು ವಿತರಿಸಲಾಯಿತು.

ಈ ವೇಳೆ ಹಿರೇಕೆರೂರ ಪಶುವೈದ್ಯಾಧಿಕಾರಿ ಡಾ.ಕಿರಣಕುಮಾರ.ಎಲ್‌, ನಿರ್ಣಾಯಕ ವೈದ್ಯರಾದ ಡಾ.ಪ್ರವೀಣ ಮರಿಗೌಡ್ರ, ಡಾ.ರಾಘವೇಂದ್ರ ಕಿತ್ತೂರ, ಡಾ.ಖಾಜಾ ನಿಜಾಮುದ್ದೀನ್‌, ಡಾ.ಯುವರಾಜ ಚವ್ಹಾಣ, ಡಾ.ಅಮಿತ್‌ ಪಟಾಣಿಕರ್‌, ಡಾ.ರಾಘವೇಂದ್ರ ಯಲಿವಾಳ, ಡಾ. ನವೀನ.ಆರ್ೆಚ್‌, ಡಾ. ಮಂಜುನಾತ ಮಾಯಾಚಾರಿ, ಕೆಎಂಎಪ್‌ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಗ್ರಾಪಂ ಅಧ್ಯಕ್ಷೆ ನಿರ್ಮಲಾ ಬಡಿಗೇರ, ಹಾ.ಉ.ಸ.ಸಂಘದ ಅಧ್ಯಕ್ಷ ರೇವಣೆಪ್ಪ ಹಂಸಭಾವಿ ಹಾಗೂ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT