ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಜಯ: ಕಾಂಗ್ರೆಸ್‌ ವಿಶ್ವಾಸ

Published 23 ಮಾರ್ಚ್ 2024, 15:45 IST
Last Updated 23 ಮಾರ್ಚ್ 2024, 15:45 IST
ಅಕ್ಷರ ಗಾತ್ರ

ಹಿರೇಕೆರೂರು: ಕಾಂಗ್ರೆಸ್‌ನ ಭದ್ರ ನೆಲೆಯಾಗಿದ್ದ ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರ, ಕ್ಷೇತ್ರ ಪುನರ್ ವಿಂಗಡಣೆಯಾಗಿ ಹಾವೇರಿ –ಗದಗ ಕ್ಷೇತ್ರವಾದ ಮೇಲೆ ಮತ್ತೆ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳುವಂತಹ ಎಲ್ಲ ಲಕ್ಷಣಗಳು ಕಂಡುಬಂದಿವೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕ ಯು.ಬಿ. ಬಣಕಾರ ಅಭಿಪ್ರಾಯಪಟ್ಟರು.

ಪಟ್ಟಣದ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಅಭ್ಯರ್ಥಿ ಕಚವಿ, ಚಿಕ್ಕೋಣತಿ, ಚಿನ್ನಮುಳಗುಂದ, ಅರಳೀಕಟ್ಟಿ, ಆಲದಗೇರಿ, ಕೋಡ, ಅಬಲೂರು, ಯತ್ತಿನಹಳ್ಳಿ ಎಂ.ಕೆ.ಹಾಗೂ ಬುರಡೀಕಟ್ಟಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಿಗೆ ತೆರಳಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸಾರ್ವಜನಿಕರ ಜತೆ ಪ್ರಚಾರ ಸಭೆ ನಡೆಸಿ ಮತಯಾಚನೆ ಮಾಡಲಾಗಿದೆ. ಮತದಾರರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಆನಂದಸ್ವಾಮಿ ಗಡ್ಡದೇವರಮಠ ಅವರು ಹಿರೇಕೆರೂರು ವಿಧಾನ ಸಭಾ ಕ್ಷೇತ್ರದಲ್ಲಿ ಮೊದಲ ಹಂತದ ಪ್ರಚಾರವನ್ನು ಕೈಗೊಂಡಿದ್ದು, ಎರಡನೇ ಹಂತದ ಮತಯಾಚನೆ ಕಾರ್ಯಕ್ರಮವನ್ನು ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ಮಾರ್ಚ್‌ 31ರಂದು ನಡೆಸಲಾಗುವುದು’ ಎಂದು ತಿಳಿಸಿದರು.

ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ನೀಡಿದ ಎಲ್ಲ ಗ್ಯಾರಂಟಿ ಯೋಜನೆಗಳು ಪ್ರತಿ ಮನೆ ಮನೆಗೆ ತಲುಪಿ ತಾಯಂದಿರು ಖುಷಿಪಡುತ್ತಿದ್ದಾರೆ. ಕೇಂದ್ರದಲ್ಲೂ ಕಾಂಗ್ರೆಸ್‌ ಮಹಾಲಕ್ಷ್ಮೀ ಯೋಜನೆ, ಉದ್ಯೋಗದಲ್ಲಿ ಶೇ 50 ರಷ್ಟು ಮಹಿಳಾ ಮೀಸಲಾತಿ, ರೈತರ ಸಾಲಮನ್ನಾ, ಶಕ್ತಿ ಗೌರವ, ಅಧಿಕಾರ ಮೈತ್ರಿ, ಮಹಿಳೆಯರಿಗಾಗಿ ವಸತಿ ನಿಲಯಗಳ ಸ್ಥಾಪನೆ ಸೇರಿದಂತೆ ಅನೇಕ ಭರವಸೆಗಳನ್ನು ಕಾಂಗ್ರೆಸ್ ಪಕ್ಷ ನೀಡಿದ್ದಾರೆ. ಕಾಂಗ್ರಸ್ ಪಕ್ಷವನ್ನು ಬೆಂಬಲಿಸುವ ವಿಶ್ವಾಸ ಇದೆ’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಮಡಿವಾಳರ, ಎಸ್.ಬಿ. ತಿಪ್ಪಣ್ಣನವರ, ಶಿವರಾಜ ಹರಿಜನ, ಮಹೇಶ ಗುಬ್ಬಿ,ಮಹೇಂದ್ರ ಬಡಳ್ಳಿ,ಸುರೇಶ ಮಡಿವಾಳರ,ಷಣ್ಮುಖಯ್ಯ ಮಳಿಮಠ, ಮಲ್ಲಿಕಾರ್ಜುನ ಬುರಡೀಕಟ್ಟಿ,ನಿಂಗಪ್ಪ ಚಳಗೇರಿ, ಸಿದ್ದನಗೌಡ ನರೇಗೌಡ್ರ,ಸನಾವುಲ್ಲಾ ಮಕನ್ದಾರ್, ಜ್ಯೋತಿ ಜಾಧವ,ಮಾದೇವಪ್ಪ ಮಾಳಮ್ಮನವರ, ಬಶೀರ್‌ಸಾಬ್ ಪಟ್ಟಣಶೆಟ್ಟಿ,ಪ್ರಕಾಶ ಉಪ್ಪಾರ, ಬಿರೇಶ ಹರ‍್ನಳ್ಳಿ, ಆನಂದ ನಾಯ್ಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT