ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವನ ಅಸ್ತಿತ್ವಕ್ಕೆ ಪರಿಸರ ಅಗತ್ಯ: ರೂಪಾ

Published 5 ಜೂನ್ 2024, 15:02 IST
Last Updated 5 ಜೂನ್ 2024, 15:02 IST
ಅಕ್ಷರ ಗಾತ್ರ

ಬ್ಯಾಡಗಿ: ಮಾನವನ ಅಸ್ತಿತ್ವವು ಪ್ರಕೃತಿಯ ಮೇಲೆ ಅವಲಂಬಿಸಿದ್ದು, ಆರೋಗ್ಯಕರ ಮತ್ತು ಸುರಕ್ಷಿತ ಪರಿಸರವಿಲ್ಲದೆ ಮನುಷ್ಯ ಸಮಾಜದ ಪರಿಕಲ್ಪನೆಯೂ ಕೂಡ ಅಪೂರ್ಣವಾಗಲಿದೆ ಎಂದು ಪಟ್ಟಣದ ಸ್ನೇಹ ಸದನ ಸಮಗ್ರ ನಿರ್ವಹಣಾ ಸಂಸ್ಥೆಯ ನಿರ್ದೇಶಕಿ ರೂಪಾ ಹೇಳಿದರು.

ತಾಲ್ಲೂಕಿನ ಗುಡ್ಡದ ಮಲ್ಲಾಪುರ ಮೂಕೇಶ್ವರ ಪ್ರೌಢ ಶಾಲಾ ಆವರಣದಲ್ಲಿ ಪಟ್ಟಣದ ಸ್ನೇಹ ಸದನ ಸಮಗ್ರ ನಿರ್ವಹಣಾ ಸಂಸ್ಥೆ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಬುಧವಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂಸ್ಥೆಯ ಸಂಯೋಜಕ ಸುವರ್ಣಾ, ಈರಣ್ಣ ಮಾಸಣಗಿ, ಮಲ್ಲಿಕಾರ್ಜುನ ಇದ್ದರು.

ತಾಲ್ಲೂಕು ಆಸ್ಪತ್ರೆ: ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪುಟ್ಟರಾಜ ಚಾಲನೆ ನೀಡಿದರು. ಡಾ.ನಾಗರಾಜ ಎಸ್‌., ಸುರೇಶ ಗುಂಡಪಲ್ಲಿ, ಡಾ.ವಿರೇಶ ಹೊಸಮನಿ, ಡಾ.ಎಸ್‌.ಎನ್‌.ನಿಡಗುಂದಿ, ಡಾ.ಮಹೇಶ ಭಜಂತ್ರಿ, ಡಾ.ರಾಘವೇಂದ್ರ ಇದ್ದರು.

ಎಸ್‌ಎಸ್‌ಪಿಎನ್‌ ಪ್ರೌಢ ಶಾಲೆ: ಪಟ್ಟಣದ ಎಸ್‌ಎಸ್‌ಪಿಎನ್‌ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷ, ಪುರಸಭೆ ಸದಸ್ಯ ಚಂದ್ರಣ್ಣ ಶೆಟ್ಟರ ಚಾಲನೆ ನೀಡಿದರು. ಉಪಪ್ರಾಚಾರ್ಯ ಎಸ್‌ದ.ಸಿ.ಎಲಿ ಇದ್ದರು.

ಅರಣ್ಯ ಇಲಾಖೆ: ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಪುರಸಭೆ ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಚಾಲನೆ ನೀಡಿದರು. ಸಹಾಯಕ ವಲಯ ಅರಣ್ಯಾಧಿಕಾರಿ ವಿ.ಎಸ್‌.ಹುಬ್ಬಳ್ಳಿ, ಸಿಬ್ಬಂದಿ ಎಂ.ಎ.ಇಟಗಿ, ಶಶಿಧರಯ್ಯ ಗೊಲ್ಲರಹಳ್ಳಿಮಠ, ದೀಪಕ ಪಟ್ಟಣಶೆಟ್ಟಿ, ಚಂದ್ರಮ್ಮ ದೇಸಾಯಿ, ಸಾವಿತ್ರಮ್ಮ ಹರಿಜನ, ವಿಶಾಲ ಹರಿಜನ ಇದ್ದರು.

ಬ್ಯಾಡಗಿ ಪಟ್ಟಣದ ಎಸ್‌ಎಸ್‌ಪಿಎನ್‌ ಪ್ರೌಢ ಶಾಲಾ ಆವರಣದಲ್ಲಿ ಸಂಸ್ಥೆಯ ಅಧ್ಯಕ್ಷ ಚಂದ್ರಣ್ಣ ಶೆಟ್ಟರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.
ಬ್ಯಾಡಗಿ ಪಟ್ಟಣದ ಎಸ್‌ಎಸ್‌ಪಿಎನ್‌ ಪ್ರೌಢ ಶಾಲಾ ಆವರಣದಲ್ಲಿ ಸಂಸ್ಥೆಯ ಅಧ್ಯಕ್ಷ ಚಂದ್ರಣ್ಣ ಶೆಟ್ಟರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.
ಬ್ಯಾಡಗಿ ತಾಲ್ಲೂಕು ಆಸ್ಪತ್ರೆ ಆವಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪುಟ್ಟಾರಾಜ ಚಾಲನೆ ನೀಡಿದರು.
ಬ್ಯಾಡಗಿ ತಾಲ್ಲೂಕು ಆಸ್ಪತ್ರೆ ಆವಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪುಟ್ಟಾರಾಜ ಚಾಲನೆ ನೀಡಿದರು.
ಬ್ಯಾಡಗಿ ಪಟ್ಟಣದ ಅಂಬೇಡ್ಕರ ಸಭಾ ಭವನದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಪುರಸಭೆ ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಚಾಲನೆ ನೀಡಿದರು.
ಬ್ಯಾಡಗಿ ಪಟ್ಟಣದ ಅಂಬೇಡ್ಕರ ಸಭಾ ಭವನದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಪುರಸಭೆ ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT