ಗಳಗನಾಥದಲ್ಲಿ ರೋಗದ ಭೀತಿ

7

ಗಳಗನಾಥದಲ್ಲಿ ರೋಗದ ಭೀತಿ

Published:
Updated:
Deccan Herald

ಗುತ್ತಲ: ಕಾದಂಬರಿ ಪಿತಾಮಹ ಗಳಗನಾಥರು ಮತ್ತು ಕಲ್ಯಾಣ ಚಾಲುಕ್ಯರು ನಿರ್ಮಿಸಿದ ಗಳಗೇಶ್ವರ ದೇವಾಲಯದಿಂದ ಖ್ಯಾತಿ ಪಡೆದ  ಹಾವೇರಿ ತಾಲ್ಲೂಕಿನ ಗಳಗನಾಥ ಗ್ರಾಮವು ಈಗ ರೋಗದ ಭೀತಿ ಎದುರಿಸುತ್ತಿದೆ. ವಾರದ ಹಿಂದೆ ಇಲ್ಲಿನ ಸವಿತಾ ಗುತ್ತಲ ಶಂಕಿತ ಡೆಂಗಿಯಿಂದ ಮೃತಪಟ್ಟಿದ್ದು, ಜನತೆಯಲ್ಲಿ ಆತಂಕ ಹೆಚ್ಚಾಗಿದೆ. 

‘ರಾತ್ರಿಯಾಗುತ್ತಿದಂತೆಯೇ ವಿಪರೀತ ಸೊಳ್ಳೆ ಕಾಟ. ಬದುಕು ದುಸ್ತರವಾಗಿದೆ. ಆದರೆ, ಗ್ರಾಮ ಪಂಚಾಯ್ತಿ ಸ್ವಚ್ಛತೆಗೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಮೃತ ಸವಿತಾ ಗುತ್ತಲ ಪತಿ ಕೋಟೆಪ್ಪ ನೋವು ತೋಡಿಕೊಂಡರು. ಅವರಿಗೆ ಆರು ತಿಂಗಳ ಮಗು ಇದೆ. 

ಮೇವುಂಡಿ ಗ್ರಾಮ ಪಂಚಾಯ್ತಿಗೆ ಸೇರಿದ ಈ ಗ್ರಾಮದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ತುಂಗಭದ್ರಾ ನದಿ ತೀರದ ಈ ಗ್ರಾಮವು 1992ರ ನೆರೆಗೆ ತತ್ತರಿಸಿತ್ತು. ಸರ್ಕಾರವು ಜನವಸತಿಯನ್ನು ದೇವಸ್ಥಾನದಿಂದ ಒಂದು ಕಿ.ಮೀ ದೂರಕ್ಕೆ ಸ್ಥಳಾಂತರಿಸಿತ್ತು. 

ಗ್ರಾಮದ ಚರಂಡಿಯಲ್ಲಿ ಹುಲ್ಲು ಮತ್ತು ಪಿಕುಜಾಲಿ ಮುಳ್ಳಿನ ಕಂಟಿಗಳು ಆವರಿಸಿವೆ. ಕೊಳಚೆ ನೀರು ನಿಂತು ಸೊಳ್ಳೆಗಳ ತಾಣವಾಗಿವೆ ಎನ್ನುತ್ತಾರೆ ಗ್ರಾಮದ ಯುವಕ ಬಸವರಾಜ ಬಟ್ಟೂರ.

ಗ್ರಾಮದ ಬಹುತೇಕ ರಸ್ತೆ, ಬಡಾವಣೆಗಳಿಗೆ ಚರಂಡಿ ನಿರ್ಮಿಸಿಲ್ಲ. ಈ ಹಿಂದಿನಿಂದ ಇದ್ದ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ. ಇದರಿಂದಾಗಿ ರೋಗದ ಭೀತಿಯಲ್ಲಿ ಜೀವನ ಸಾಗಿಸುತ್ತಿದ್ದೇವೆ ಎಂದು ಗ್ರಾಮ ಹೊನ್ನಮ್ಮ ಕರಿಯಪ್ಪ ಅಂಬಿಗೇರ ದೂರಿದರು. 

ಗ್ರಾಮದಲ್ಲಿ ಸ್ವಚ್ಛತೆ ಕಾಪಾಡದಿದ್ದರೆ, ಮೇವುಂಡಿ ಗ್ರಾಮ ಪಂಚಾಯ್ತಿ ಬೀಗ ಹಾಕಿ ಪ್ರತಿಭಟನೆ ನಡೆಸುವುದಾಗಿ ಇಲ್ಲಿನ ಫಕ್ಕೀರೇಶ ಕರಡಿ, ಬಸವರಾಜ ತಿಮ್ಮಣ್ಣನವರ, ನಾಗಪ್ಪ ಪೂಜಾರ, ದೇವೇಂದ್ರಪ್ಪ ಕಾಡಮ್ಮನವರ, ನಿಂಗಪ್ಪ ಅಂಬಿಗೇರ, ನಾಗಪ್ಪ ಮುಡಿಯಮ್ಮನವರ, ಮಂಜಪ್ಪ ದ್ಯಾಮಕ್ಕನವರ, ದುರಗಪ್ಪ ಕರಿಯಪ್ಪನವರ ಎಚ್ಚರಿಕೆ ನೀಡಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !