ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಸಾಮೂಹಿಕ ಅತ್ಯಾಚಾರ: ಬಂಧಿತ ಆರೋಪಿಗಳ ಸಂಖ್ಯೆ 14ಕ್ಕೆ ಏರಿಕೆ

Published 21 ಜನವರಿ 2024, 17:46 IST
Last Updated 21 ಜನವರಿ 2024, 17:46 IST
ಅಕ್ಷರ ಗಾತ್ರ

ಹಾವೇರಿ: ಹಾನಗಲ್‌ ತಾಲ್ಲೂಕಿನ ನಾಲ್ಕರ ಕ್ರಾಸ್‌ ಸಮೀಪ ಜ. 8ರಂದು ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಭಾನುವಾರ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಈವರೆಗೆ ಒಟ್ಟು 14 ಆರೋಪಿಗಳನ್ನು ಬಂಧಿಸಿದಂತಾಗಿದೆ.

ಅಕ್ಕಿಆಲೂರಿನ ರಿಯಾಜ್ ಸಾವಿಕೇರಿ (27) ಮತ್ತು ನಿಯಾಜ್ ದರ್ಗಾ (24) ಬಂಧಿತ ಆರೋಪಿಗಳು.

‘ಅತ್ಯಾಚಾರದಲ್ಲಿ ಭಾಗಿಯಾದ 7 ಆರೋಪಿಗಳು ಹಾಗೂ ಹಲ್ಲೆ ಇತರ ಅಪರಾಧಗಳಲ್ಲಿ ಭಾಗಿಯಾದ 7 ಆರೋಪಿಗಳು ಸೇರಿದಂತೆ ಇದುವರೆಗೆ 14 ಆರೋಪಿಗಳನ್ನು ಬಂಧಿಸಿದ್ದೇವೆ' ಎಂದು ಹೆಚ್ಚುವರಿ ಎಸ್‌ಪಿ ಗೋಪಾಲ್‌ ಸಿ. ತಿಳಿಸಿದ್ದಾರೆ. 

ಬಂಧಿತ ಇತರ ಆರೋಪಿಗಳು: ಅಕ್ಕಿಆಲೂರಿನ ಗ್ಯಾರೇಜ್‌ ಕಾರ್ಮಿಕ ಅಫ್ತಾಬ್‌ ಚಂದನಕಟ್ಟಿ (24), ವ್ಯಾಪಾರಿ ಮಾದರಸಾಬ್‌ ಮಂಡಕ್ಕಿ (23), ಆಟೊ ಚಾಲಕ ಅಬ್ದುಲ್ ಖಾದರ್‌ ಜಾಫರಸಾಬ್‌ ಹಂಚಿನಮನಿ (28), ಹಾಲಿನ ವ್ಯಾಪಾರಿ ಇಮ್ರಾನ್‌ ಬಶೀರ್‌ ಅಹಮದ್‌ ಜೇಕಿನಕಟ್ಟಿ (23), ಗ್ಯಾರೇಜ್‌ ಕಾರ್ಮಿಕ ರೇಹಾನ್‌ ಮಹಮ್ಮದ್‌ ಹುಸೇನ್ ವಾಲೀಕಾರ (19), ಸಂತೆ ವ್ಯಾಪಾರಿ ಸಾದಿಕ್ ಬಾಬುಸಾಬ್ ಅಗಸಿಮನಿ (29), ಹೋಟೆಲ್ ಕಾರ್ಮಿಕ ಶೋಯೆಬ್ ನಿಯಾಜ್ ಅಹ್ಮದ್ ಮುಲ್ಲಾ (19), ಮಫೀದ್‌ ಓಣಿಕೇರಿ (23). ಅಕ್ಕಿಆಲೂರಿನ ಮೀನು ವ್ಯಾಪಾರಿ ಇಬ್ರಾಹಿಂ ಖಾದರ್‌ ಗೌಸ್‌ (27), ಕಾರು ಚಾಲಕ ತೌಸಿಫ್‌ ಅಹಮದ್‌ ಚೌಟಿ ಅಲಿಯಾಸ್‌ ಕಾಟ್ಲ (25), ಟೆಂಪೊ ಚಾಲಕ ಸಮಿವುಲ್ಲಾ ಲಾಲನವರ (24) ಮತ್ತು ತರಕಾರಿ ವ್ಯಾಪಾರಿ ಇಸ್ಮಾಯಿಲ್‌ ಹುಬ್ಬಳ್ಳಿ (27) ಬಂಧಿತರು. 

ಕಿಮ್ಸ್ ನಲ್ಲಿ ಚಿಕಿತ್ಸೆ: ಆರೋಪಿ ಮಹಮ್ಮದ್ ಸೈಫ್‌ ಸಾವಿಕೇರಿ ಎಂಬಾತ ಅಪಘಾತದಲ್ಲಿ ಕಾಲಿನ ಮೂಳೆ ಮುರಿದುಕೊಂಡು, ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಒಂದು ವಾರ ಚಿಕಿತ್ಸೆ ಪಡೆದಿದ್ದ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಚಿಕಿತ್ಸೆ ಪೂರ್ಣಗೊಂಡ ಬಳಿಕ ಬಂಧಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT