ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯ ಶಿವನ ಸ್ಮರಣೆ ಮಾಡಿ: ಶ್ರೀ

ಜಟಾದಾರಿಸ್ವಾಮಿ ರಥೋತ್ಸವ ಸಂಭ್ರಮ
Published 10 ಮಾರ್ಚ್ 2024, 14:16 IST
Last Updated 10 ಮಾರ್ಚ್ 2024, 14:16 IST
ಅಕ್ಷರ ಗಾತ್ರ

ತಡಸ: ‘ಶಿವನ ನಾಮ ಸ್ಮರಣೆಯಿಂದ ಪಾಪಗಳು ದೂರವಾಗುತ್ತವೆ. ನಿತ್ಯ ಶಿವನ ಸ್ಮರಣೆ ಮಾಡಬೇಕು. ಓಂ ನಮಃ ಶಿವಾಯ ಎಂಬ ಮಂತ್ರದಿಂದ ಎಲ್ಲ ಕಾರ್ಯವು ಸಿದ್ದವಾಗುತ್ತವೆ. ಮಾಡುವ ಕಾಯಕದಲ್ಲಿ ಈ ಮಂತ್ರವನ್ನು ಪಟಿಸುವುದರಿಂದ ಸುಖ, ಶಾಂತಿ, ನೆಮ್ಮದಿ ದೊರೆಯುವುದು’ ಎಂದು ಬೆಳಗಾವಿ ಮುಕ್ತಿಮಠ ಹಾಗೂ ತಡಸ ಸಮೀಪವಿರುವ ಭೂ ಹಲಿಕಟ್ಟಿಯ ಶೈಲೇಶ್ವರ ಮಠದ ಶಿವಶಿದ್ಧ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಡಸ ಗ್ರಾಮದ ಸಮೀಪವಿರುವ ಭೂ ಹುಲಿಕಟ್ಟಿಯ ಶೈಲೇಶ್ವರ ಮಠದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದವರು.‌

ಕಲಘಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಧಾರವಾಡ (ಕಲಘಟಗಿ ಕ್ಷೇತ್ರ)ಕೆಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥಗೌಡ ಮೂರಳ್ಳಿ ಮಾತನಾಡಿ, ‘ಮಠದ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಅನುದಾನ ನೀಡುವ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

ಹಿರೇಮುನವಳ್ಳಿ ಗ್ರಾಮದ ಕ್ಯಾಂಡಿಲೇಶ್ವರ ಮಠದ ಶಂಭುಲಿಂಗೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು.  ಚನ್ನಯ್ಯಸ್ವಾಮಿಗಳು ಹಿರೇಮಠ, ಗದಿಗೆಪ್ಪ ಕಬನೂರ, ಲಕ್ಕಪ್ಪ ಕೋಪ್ಪದ, ಗುರುನಾಥಗೌಡ್ರ ಬಸನಗೌಡ್ರ, ಗ್ರಾಮ ಪಂಚಾಯ್ತಿ, ಉಪಾಧ್ಯಕ್ಷೆ ಕಸ್ತೂರೆವ್ವಬಾರಕೇರ, ಹನುಮಂತಗೌಡ್ರ ಪಾಟೀಲ, ನಿರ್ಮಲಾ ಹೋಸಮನಿ, ಸಕ್ಕೂಬಾಯಿ ವೀರಪ್ಪನವರ, ಗದಿಗೆಪ್ಪ ಕಬನೂರ, ಎಸ್.ಸಿ.ಜಕ್ಕನಗೌಡ್ರ, ಎಂ.ಎಸ್.ಪಾಟೀಲ, ಶಿದ್ದಪ್ಪ ಹದ್ಲಿ, ಮಾಹಾಂತಪ್ಪ ಕೋಡಿ, ಗ್ರಾಮಸ್ಥರು, ಭಕ್ತರು ಇದ್ದರು.

ಜಟಾದಾರಿಸ್ವಾಮಿ ರಥೋತ್ಸವ ಅದ್ದೂರಿಯಾಗಿ ಜರುಗಿತು.

ತಡಸ ಗ್ರಾಮದ ಸಮೀಪವಿರುವ ಭೂ ಹುಲಿಕಟ್ಟಿಯ ಶೈಲೇಶ್ವರ ಮಠದ ಮಹಾಶಿವರಾತ್ರಿ ನಿಮಿತ್ಯವಾಗಿ ರಥೋತ್ಸವದ ಪೂರ್ವದಲ್ಲಿ ಧರ್ಮ ಸಭೆಯಲ್ಲಿ ಬೆಳಗಾವಿ ಮುಕ್ತಿಮಠ ಹಾಗೂ ತಡಸ ಸಮೀಪವಿರುವ ಭೂ ಹಲಿಕಟ್ಟಿಯ ಶೈಲೇಶ್ವರ ಮಠದ ಶಿವಶಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನವನ್ನು ನೀಡಿದರು.
ತಡಸ ಗ್ರಾಮದ ಸಮೀಪವಿರುವ ಭೂ ಹುಲಿಕಟ್ಟಿಯ ಶೈಲೇಶ್ವರ ಮಠದ ಮಹಾಶಿವರಾತ್ರಿ ನಿಮಿತ್ಯವಾಗಿ ರಥೋತ್ಸವದ ಪೂರ್ವದಲ್ಲಿ ಧರ್ಮ ಸಭೆಯಲ್ಲಿ ಬೆಳಗಾವಿ ಮುಕ್ತಿಮಠ ಹಾಗೂ ತಡಸ ಸಮೀಪವಿರುವ ಭೂ ಹಲಿಕಟ್ಟಿಯ ಶೈಲೇಶ್ವರ ಮಠದ ಶಿವಶಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನವನ್ನು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT