ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೇಕಾರರು ಶಿಕ್ಷಣ, ಸಂಘಟನೆಗೆ ಆದ್ಯತೆ ನೀಡಲಿ’

ದೇವರ ದಾಸಿಮಯ್ಯನವರ ಜಯಂತ್ಯುತ್ಸವ 
Published 13 ಏಪ್ರಿಲ್ 2024, 16:12 IST
Last Updated 13 ಏಪ್ರಿಲ್ 2024, 16:12 IST
ಅಕ್ಷರ ಗಾತ್ರ

ರಾಣೆಬೆನ್ನೂರು: ನೇಕಾರರು ಶಿಕ್ಷಣ ಮತ್ತು ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ನೇಕಾರ ಎಲ್ಲ ಒಳಪಂಗಡದವರು ಒಂದಾಗಿ ಒಗಟ್ಟನ್ನು ತೋರಿಸಬೇಕು. ನಾವು ಒಂದಾದಾಗ ಮಾತ್ರ ಸರ್ಕಾರಗಳು ನಮ್ಮನ್ನು ಗುರುತಿಸಲಿದೆ ಎಂದು ಜಿಲ್ಲಾ ನೇಕಾರ ಒಕ್ಕೂಟದ ಗೌರವ ಅಧ್ಯಕ್ಷ ಡಾ.ಬಸವರಾಜ ಎಸ್‌. ಕೇಲಗಾರ ಹೇಳಿದರು.

ಇಲ್ಲಿನ ಹಾವೇರಿ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದಿಂದ ಶನಿವಾರ ಏರ್ಪಡಿಸಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಿವೃತ್ತ ಶಿಕ್ಷಕ ಸೋಮಶೇಖರ್ ಕೆ. ದುರ್ಗಸಿಮಿ ಮಾತನಾಡಿದರು. ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಹನುಮಂತಪ್ಪ ಟಿ. ಮುಕ್ತೇನಹಳ್ಳಿ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಿಕೊಟ್ಟರು.

ಜಿಲ್ಲಾ ನೇಕಾರ ಪಟ್ಟಶಾಲಿ ಸಮಾಜದ ಅಧ್ಯಕ್ಷ ರಮೇಶ ಗುತ್ತಲ, ಶಂಕರಣ್ಣ ನ್ಯಾಮತಿ, ಸೋಮಶೇಖರ ದುರ್ಗದಸೀಮಿ, ಅಮಾಸಿ ಹನುಮಂತಪ್ಪ, ಪಾಂಡಪ್ಪ ಪೂಜಾರಿ, ಶಿವಣ್ಣ ಬಡೇಂಕಲ್ ಅಶೋಕ್ ದುರ್ಗಸೀಮಿ, ಸಂಕಪ್ಪ ಮಾರನಾಳ, ಗಣೇಶ ಶಿರಗೂರ, ನೀಲಪ್ಪ ಕುಮಾರಪ್ಪನವರ, ಪಾಂಡಪ್ಪ ವಗ್ಗಾ, ಮಂಜುನಾಥ ಹುಬ್ಬಳ್ಳಿ, ಬಸವರಾಜ ಮೈಲಾರ, ಗಣೇಶ ಹಾವನೂರು, ಎಲ್ಲಪ್ಪ ಗುತ್ತಲ, ಪರಶುರಾಮ್ ಅಗಡಿ, ವೆಂಕಟೇಶ್ ಪೆನಗೊಂಡಲ, ವಾಸಪ್ಪ ನೇಕಾರ, ನಾಗರಾಜ ಕಾಸಲ, ವೀರಣ್ಣ ಕೋಳಿವಾಡ, ವೆಂಕಟೇಶ್ ಕಾಕಿ, ಅರವಿಂದ ಏಕಬೋಟೆ, ದೇವರಾಜ ಚಿದಾನಂದ, ಮಹಿಳಾ ಸಂಘದ ಶಶಿಕಲಾ ಬಡೆಂಕಲ, ಶಾರದ ಆನವೇರಿ, ಲಕ್ಷ್ಮಿ ಎಡಕಿ, ಸುಮಾ ಹಳ್ಳಿ, ಜಯಶ್ರೀ ಕುಂಚೂರು, ಚಂದ್ರಪ್ಪ ರಿತ್ತಿ, ಆನಂದ ಕದರಮಂಡಲಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT