ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳ ಆಧುನೀಕರಣಕ್ಕೆ ₹9 ಕೋಟಿ ಬಿಡುಗಡೆ

ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ
Last Updated 1 ಸೆಪ್ಟೆಂಬರ್ 2022, 12:35 IST
ಅಕ್ಷರ ಗಾತ್ರ

ಹಿರೇಕೆರೂರು: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಡಿ 2022-23ನೇ ಸಾಲಿನಲ್ಲಿ ಹಿರೇಕೆರೂರು ಹಾಗೂ ರಟ್ಟಿಹಳ್ಳಿ ವಿಧಾನಸಭಾ ಕ್ಷೇತ್ರದ 4702 ಕೆರೆಗಳ ಆಧುನೀಕರಣ ಕಾಮಗಾರಿಗಳನ್ನು ಕೈಗೊಳ್ಳಲು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿವರು ₹9.20 ಕೋಟಿಗಳ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಹಿರೇಕೆರೂರು ಪಟ್ಟಣದ ಸಚಿವರ ಗೃಹ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಲದಗೇರಿ ಗ್ರಾಮದ ಚಿಕ್ಕೇರಿ ಕೆರೆ ಸುಧಾರಣೆಗೆ ₹1 ಕೋಟಿ, ಶಂಕರನಹಳ್ಳಿ ಗ್ರಾಮದ ವಡ್ಡಿನಕೆರೆ ಕೋಡಿ ಕಾಲುವೆ ಹಾಗೂ ರಸ್ತೆ ಸುಧಾರಣೆಗೆ ₹1ಕೋಟಿ, ರಟ್ಟೀಹಳ್ಳಿ ತಾಲ್ಲೂಕಿನ ಗುಡ್ಡದಮಾದಾಪುರ ಗ್ರಾಮದ ಸಣ್ಣ ನೀರಾವರಿ ಕೆರೆ (ಹೊಸಕೆರೆಯ) ಅಭಿವೃದ್ಧಿ ಕಾಮಗಾರಿಗೆ ₹2 ಕೋಟಿ, ಹಿರೇಕೆರೂರು ತಾಲ್ಲೂಕಿನ ಮಡ್ಲೂರು ಗ್ರಾಮದ ಕೊಪ್ಪದ ಕೆರೆ ಕೋಡಿ ಕಾಲುವೆ ಪುನರುಜ್ಜೀವನ ಕಾಮಗಾರಿಗೆ ₹40 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದರು.

ಚಿನ್ನಮುಳುಗುಂದ ಗ್ರಾಮದ ದೊಡ್ಡಕೆರೆ ಹಾಗೂ ಮೇಲಿನಕೆರೆ ಪುನರುಜ್ಜೀವನ ಕಾಮಗಾರಿ ₹40 ಲಕ್ಷ, ಕಚವಿ ಗ್ರಾಮದ ಸುಳೆಕೆರೆ ಏರಿ ಹಾಗೂ ತೂಬುಗಳ ಪುನರುಜ್ಜೀವನ ಕಾಮಗಾರಿ ₹40 ಲಕ್ಷ, ಚಿಕ್ಕೋಣ್ತಿ ಗ್ರಾಮದ ದೊಡ್ಡಕೆರೆಗೆ ಬರುವ ಪೂರಕ ಕಾಲುವೆ ಪುನರುಜ್ಜೀವನ ಕಾಮಗಾರಿ ₹50 ಲಕ್ಷ, ಕೋಡ ಗ್ರಾಮದ ದೊಡ್ಡಕೆರೆ ಕೋಡಿ ಹಾಗೂ ತೂಬುಗಳ ಪುನರುಜ್ಜೀವನ ಕಾಮಗಾರಿ ₹40 ಲಕ್ಷ, ನಿಡನೇಗಿಲು ಗ್ರಾಮದ ದೊಡ್ಡಕೆರೆಯ ಕೋಡಿ ಸಹಿತ ಸೇತುವೆ ಹಾಗೂ ತೊಬುಗಳ ನಿರ್ಮಾಣಕ್ಕೆ ₹1 ಕೋಟಿ, ಹಿರೇಕೆರೂರ ಪಟ್ಟಣದ ದುರ್ಗಾದೇವಿ ಕೆರೆ ಪುನರುಜ್ಜೀವನ ಹಾಗೂ ಶೇಷಪ್ಪನ ವಡ್ಡಿನ ಹತ್ತಿರ ಕೋಡಿ ಸಹಿತ ಸೇತುವೆ ನಿರ್ಮಾಣ ಕಾಮಗಾರಿಗೆ ₹1.50 ಲಕ್ಷ ಅನುದಾನವನ್ನು ಮೀಸಲಿಡಲಾಗಿದೆ ಎಂದು ಹೇಳಿದರು.

ರಟ್ಟೀಹಳ್ಳಿ ತಾಲ್ಲೂಕಿನ ಮಾವಿನತೋಪು ಗ್ರಾಮದ ಹತ್ತಿರ ಚೆಕ್ ಡ್ಯಾಂ ಪುನರುಜ್ಜೀವನ ಕಾಮಗಾರಿಗೆ ₹30 ಲಕ್ಷ, ಚಿಕ್ಕೋಣತಿ ವೀರಾಪುರ ಬ್ಯಾರೇಜ್ ಸಹಿತ ಸೇತುವೆಯ ಪುನರುಜ್ಜೀವನ ಕಾಮಗಾರಿಗೆ ₹30 ಲಕ್ಷವನ್ನು ರಾಜ್ಯ ಸರ್ಕಾರವು ಬಿಡುಗಡೆಗೊಳಿಸಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT