ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತವೀರ ಪಟ್ಟಾಧ್ಯಕ್ಷರ ಸ್ಮರಣೋತ್ಸವ 4ರಿಂದ

ಹಾವೇರಿಯ ಸಿಂದಗಿಮಠದಲ್ಲಿ ಒಂದು ವಾರ ಮಹಾತ್ಮರ ಜೀವನದರ್ಶನ ಪ್ರವಚನ, ಧಾರ್ಮಿಕ ಕಾರ್ಯಕ್ರಮ
Published 1 ಮಾರ್ಚ್ 2024, 6:55 IST
Last Updated 1 ಮಾರ್ಚ್ 2024, 6:55 IST
ಅಕ್ಷರ ಗಾತ್ರ

ಹಾವೇರಿ: ನಗರದ ಸಿಂದಗಿಮಠದ ಲಿಂ. ಶಾಂತವೀರ ಪಟ್ಟಾಧ್ಯಕ್ಷರ 44ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವನ್ನು ಮಾರ್ಚ್‌ 4ರಿಂದ 10ರವರೆಗೆ ಶ್ರೀಮಠದಲ್ಲಿ ಆಯೋಜಿಸಲಾಗಿದೆ.

4ರಂದು ಸಂಜೆ 7.30ಕ್ಕೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಕಾರ್ಯಕ್ರಮ‌ ಉದ್ಘಾಟಿಸುವರು. ತಾರೀಹಾಳ ಅಡವಿಸಿದ್ಧೇಶ್ವರ ಮಠದ ಅಡವೀಶ್ವರ ದೇವರು ಪ್ರತಿದಿನ ಮಹಾತ್ಮರ ಜೀವನದರ್ಶನ ಪ್ರವಚನ ನಡೆಸಿಕೊಡಲಿದ್ದಾರೆ.

ಸಂಗೀತ ಕಾರ್ಯಕ್ರಮ: ಮಾರ್ಚ್‌ 5ರಂದು ಸಂಜೆ 7.30ಕ್ಕೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ತೊಗರ್ಸಿ ಮಳೇಹಿರೇಮಠದ ಗುರುಬಸವ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದು, ಹುಬ್ಬಳ್ಳಿಯ ಹಿಂದೂಸ್ತಾನಿ ಗಾಯಕಿ ರೇಖಾ ಹೆಗಡೆ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. 

6ರಂದು ಸಂಜೆ 7.30ಕ್ಕೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಲಗೇರಿ ಶಾಂತವೀರೇಶ್ವರ ಪ್ರಣವ ಕುಟೀರದ ಶಾಂತವೀರ ಶಿವಾಚಾರ್ಯರು ವಹಿಸಲಿದ್ದಾರೆ. ಗದಗ ವೀರೇಶ್ವರ ಪುಣ್ಯಾಶ್ರಮದ ರಾಹುಲ ರಾಠೋಡ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

7ರಂದು ಸಂಜೆ 7.30ಕ್ಕೆ ನಡೆಯುವ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೈರನಹಟ್ಟಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ವಹಿಸಲಿದ್ದು, ನರೇಗಲ್‌ನ ಅರುಣ ಕುಲಕರ್ಣಿ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಜರುಗಲಿದೆ. 

ಮಹಾಶಿವರಾತ್ರಿ ವಿಶೇಷ: 8ರಂದು ಮಹಾಶಿವರಾತ್ರಿ ಅಂಗವಾಗಿ ಸಂಜೆ 8.30ಕ್ಕೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋತನಹಳ್ಳಿ ಸಿಂದಗಿಮಠದ ಶಂಭುಲಿಂಗ ಪಟ್ಟಾಧ್ಯಕ್ಷರು ವಹಿಸಲಿದ್ದಾರೆ. ಹಾವೇರಿಯ ಕುಮಾರ, ತುಷಾರ ರವೀಂದ್ರ ಮಾಳಗಿ ಅವರಿಂದ‌ ಭಕ್ತಿ ಸಂಗೀತ ನಡೆಯಲಿದೆ.

9ರಂದು ಸಂಜೆ 7.30ಕ್ಕೆ ಜರುಗುವ ಕಾರ್ಯಕ್ರಮದಲ್ಲಿ ಆನಂದಪುರ ಮುರುಘಾಮಠದ  ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಖಾಸಗಿ ವಾಹಿನಿಯ ಸರಿಗಮಪ ಖ್ಯಾತಿಯ ಜ್ಞಾನೇಶ ಬಳ್ಳಾರಿ ವಿಶೇಷ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಸನ್ಮಾನ: ಇದೇ ಸಂದರ್ಭದಲ್ಲಿ ಸವಣೂರಿನ ಬಸವರಾಜ ಸಿಂಧೂರ, ಪ್ರಗತಿಪರ ರೈತ ಬಸವರಾಜ ಪೂಜಾರ, ಸತೀಶ ಕುಲಕರ್ಣಿ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಗುತ್ತದೆ. ಮಾರ್ಚ್‌ 16ರಂದು ಶನಿವಾರ ರಾತ್ರಿ 7.30ಕ್ಕೆ ಊರೂಟ ಜರುಗಲಿದೆ.

ಮಾರ್ಚ್‌ 7ರಂದು ಆರೋಗ್ಯ ಶಿಬಿರ

ಮಾರ್ಚ್‌ 7ರಂದು ಬೆಳಿಗ್ಗೆ 10.30ಕ್ಕೆ ಶ್ರೀ ಮಠದಲ್ಲಿ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರಿಂದ ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಹುಬ್ಬಳ್ಳಿಯ ಜಯಪ್ರಿಯ ಕಣ್ಣಿನ ಆಸ್ಪತ್ರೆ ಹಾಗೂ ಹಾವೇರಿಯ ಸೃಜನ್ ಆಪ್ಟಿಕಲ್ ಸಹಯೋಗದಲ್ಲಿ ಉಚಿತವಾಗಿ ನೇತ್ರ ತಪಾಸಣೆ ಜರುಗಲಿದೆ.

ತೋಂಟದ ಶ್ರೀಗಳ ಪುಣ್ಯಸ್ಮರಣೆ ಮಾರ್ಚ್‌ 10ಕ್ಕೆ

ಮಾರ್ಚ್‌ 10ರಂದು ಪ್ರಾತಃಕಾಲದಲ್ಲಿಸಿಂದಗಿ ಗುರುಗಳ ಗದ್ದುಗೆಗೆ ರುದ್ರಾಭೀಷೇಕ ಬಿಲ್ವಾರ್ಚನೆ ಜರುಗಲಿದೆ. ಸಂಜೆ 7.30ಕ್ಕೆ ಗದುಗಿನ ಲಿಂ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಪುಣ್ಯಸ್ಮರಣೆ ಹಾಗೂ ಪ್ರವಚನ ಮಂಗಲ ಕಾರ್ಯಕ್ರಮ ಜರುಗಲಿದೆ. ಡಂಬಳ-ಗದಗ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು ಸಿಂದಗಿ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ 50 ವರ್ಷಗಳಿಂದ ಬ್ಯಾಡಗಿ ಶ್ರೀ ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯನ್ನು ಮುನ್ನಡೆಸಿದ ರಾಚಯ್ಯ ಶಾಸ್ತ್ರಿ ಓದಿಸೋಮಠ ಅವರನ್ನು ಸನ್ಮಾನಿಸಲಾಗುತ್ತಿದೆ. ಬಳ್ಳಾರಿಯ ಪ್ರಕಾಶ ಮತ್ತು ನೇತ್ರಾವತಿ ಹೆಮ್ಮಾಡಿ ಅವರು ವಿಶೇಷ ಜಾದೂ ಪ್ರದರ್ಶನ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT