ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಜಾ ಮಾರಾಟ: ಇಬ್ಬರ ಬಂಧನ

Published 11 ಏಪ್ರಿಲ್ 2024, 16:12 IST
Last Updated 11 ಏಪ್ರಿಲ್ 2024, 16:12 IST
ಅಕ್ಷರ ಗಾತ್ರ

ಹಾವೇರಿ: ನಗರದ ಹಾನಗಲ್‌ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಜಾನುವಾರು ಮಾರುಕಟ್ಟೆಯ ಆವರಣದಲ್ಲಿ ನಿಷೇಧಿತ ಹೂವು, ಮೊಗ್ಗು ಬೀಜ ಮಿಶ್ರಿತ ಘಾಟು ವಾಸನೆಯುಳ್ಳ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಬಂಡಾರಹಳ್ಳಿಯ ಆಟೊ ಚಾಲಕ ಅಭಿಲಾಷ ನೀಲಕಂಠಪ್ಪ (27) ಮತ್ತು ಅದೇ ಗ್ರಾಮದ ಕಾರು ಚಾಲಕ ಅಜಯ ಕೃಷ್ಣಮೂರ್ತಿ (24) ಎಂಬುವರು ಬಂಧಿತರು. ಆರೋಪಿಗಳಿಂದ ₹22,900 ಮೌಲಯ್ದ 458 ಗ್ರಾಂ ಗಾಂಜಾ, ಡಿಜಿಟಲ್‌ ತೂಕದ ಯಂತ್ರ, ಮೊಬೈಲ್‌ ಫೋನ್‌, ಆಟೊವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹಾವೇರಿಯ ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಶಿವಶಂಕರ ಗಣಾಚಾರಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT