ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ಯಾರಂಟಿ ತಿರಸ್ಕರಿಸಿ, ದೇಶದ ಅಭಿವೃದ್ಧಿಗೆ ಮನ್ನಣೆ ನೀಡಿದ ಮತದಾರ: ಪಾಟೀಲ

Published 8 ಜೂನ್ 2024, 15:09 IST
Last Updated 8 ಜೂನ್ 2024, 15:09 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ‘ರಾಜ್ಯದ ಜನತೆ ಕಾಂಗ್ರೆಸ್ ಪಕ್ಷ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ತಿರಸ್ಕರಿಸಿ, ದೇಶದ ಅಭಿವೃದ್ಧಿಗೆ ಮೋದಿ ಕೈ ಬಲಪಡಿಸಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮನ್ನಣೆ ನೀಡಿರುವುದು ಸ್ಪಷ್ಟವಾಗಿ ಗೋಚರವಾಗಿದೆ’ ಎಂದು ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಪಕ್ಷದ ಮುಖಂಡರು, ಕಾರ್ಯಕರ್ತರ ಅವಿರತ ಶ್ರಮದಿಂದಾಗಿ ಬಸವರಾಜ ಬೊಮ್ಮಾಯಿಯವರು ಲೋಕಸಭಾ ಅಭ್ಯರ್ಥಿಯಾಗಿ ಆಯ್ಕೆಗೊಂಡಿರುವುದು ಸಂತಸ ತಂದಿದೆ. ಪಕ್ಷದ ಬಲವರ್ಧನೆಗೆ ಕಾರ್ಯಕರ್ತರು ಪ್ರತಿಸಾರಿ ಚುನಾವಣೆಯ ಸಮಯದಲ್ಲಿ ಹೆಚ್ಚಿನ ಶ್ರಮವಹಿಸಬೇಕು’ ಎಂದರು.

ಹಿರೇಕೆರೂರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರಿಗೆ ಹೆಚ್ಚಿನ ಮತವನ್ನು ಮತದಾರರು ನೀಡಿದ್ದಾರೆ ಎಂದರು.

ಬಿಜೆಪಿ ಮುಖಂಡರು ಕಾರ್ಯಕರ್ತರು ಮಾತನಾಡಿ, ‘ಸಂಸದ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ ನಿರಂತರವಾಗಿ ಸಂಪರ್ಕಯಿಟ್ಟುಕೊಂಡು, ಜನತೆಯ ಕಷ್ಟ ಸುಖಗಳನ್ನು, ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿತರುವಲ್ಲಿ, ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಸಕ್ರೀಯರಾಗಬೇಕು’ ಎಂದು ಸಲಹೆ ನೀಡಿದರು.

ಈ ವೇಳೆ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ದೇವರಾಜ ನಾಗಣ್ಣನವರ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಕಾವ್ಯ ಪಾಟೀಲ, ಮುಖಂಡರಾದ ಶಂಭಣ್ಣ ಗೂಳಪ್ಪನವರ, ಗಣೇಶ ವೇರ್ಣೇಕರ, ಶಂಕರಗೌಡ ಚನ್ನಗೌಡ್ರ, ವೀರನಗೌಡ ಮಕರಿ, ಸುಶೀಲ ನಾಡಗೇರ, ರಾಘವೇಂದ್ರ ಹರವಿಶೆಟ್ರ, ರೂಪಾ ಅಂಬ್ಲೇರ, ಆನಂದಪ್ಪ ಹಾದಿಮನಿ, ಶಿವಕುಮಾರ ಉಪ್ಪಾರ, ಸುರೇಶ ಬೆಣ್ಣಿ, ಸಂದೀಪ ಪಾಟೀಲ, ಸರೋಜಾ ಹುರಕಡ್ಲಿ, ಕೆ.ವಿ. ವರದಹದ, ಸಿದ್ದಪ್ಪ ಹರಿಜನ, ರಾಜುಗೌಡ ಪಾಟೀಲ, ರಾಜು ಬಟ್ಲಕಟ್ಟಿ, ಸಿದ್ದು ಹಲಗೇರಿ, ಪ್ರಕಾಶ ಎಲಿವಾಳ, ಮಾಲತೇಶ ಬೆಳಕೇರಿ, ಸೇರಿದಂತೆ ಹಲವಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT