ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಗಾ ಮೇಲ್ದಂಡೆ ಯೋಜನೆಯಿಂದ ನೀರು ತಂದಿದ್ದೇವೆ: ಬಸವರಾಜ ಬೊಮ್ಮಾಯಿ

Published 3 ಮೇ 2024, 16:18 IST
Last Updated 3 ಮೇ 2024, 16:18 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ತುಂಗಾ ಮೇಲ್ದಂಡೆ ಯೋಜನೆಯಿಂದ ಹಾವೇರಿ ಜಿಲ್ಲೆಗೆ ನೀರು ತರುವುದು ಅಸಾಧ್ಯವಾಗಿದ್ದನ್ನು ಸಾಧ್ಯ ಮಾಡಿದ್ದೇವೆ’ ಎಂದು ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲ್ಲೂಕಿನ ಹನುಮಾಪುರ, ಹೊನ್ನತ್ತಿ, ಗುಡ್ಡದಆನವೇರಿ, ಗುಡ್ಡದಗುಡ್ಡಾಪುರ, ಕಜ್ಜರಿ ಗ್ರಾಮಗಳಲ್ಲಿ ಬುಧವಾರ ರೋಡ್ ಶೋ ನಡೆಸಿ ಮತಯಾಚನೆ ಮಾಡಿ ಮಾತನಾಡಿದರು.

‘ತುಂಗಾ ಮೇಲ್ದಂಡೆ ಯೋಜನೆಯ ಮೂಲಕ ರಾಣೆಬೆನ್ನೂರಿಗೆ ನೀರು ತರುವ ಯೋಜನೆಯನ್ನು 2008ರಲ್ಲಿ ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಸಭೆ ಮಾಡಿ, 2011ರಲ್ಲಿ ಯೋಜನೆ ಪೂರ್ಣಗೊಳಿಸುವುದಾಗಿ ಹೇಳಿದ್ದೆ, ಆದರೆ, ಅದು ಅಸಾಧ್ಯವೆಂದು ಹೇಳಿದ್ದರು. ನಾಲ್ಕು ಬಾರಿ ಟೆಂಡರ್ ಕರೆದರೂ ಯಾರೂ ಬರಲಿಲ್ಲ. ಕಡೆಗೆ ನನ್ನ ಸ್ನೇಹಿತ ತಂತ್ರಜ್ಞಾನ ಬಳಸಿ ಆಳದಲ್ಲಿ ಕೆನಲ್‌ ಮಾಡಿ ನೀರು ತಂದೆವು’ ಎಂದು ಹೇಳಿದರು.

‘ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಬ್ಯಾಡಗಿ ಕ್ಚೇತ್ರಕ್ಕೆ ಅತಿ ಹೆಚ್ಚು ₹ 2000 ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಅವರಿಗೆ ಧನ್ಯವಾದ ಹೇಳಬೇಕು. ಪ್ರಧಾನಿ ನರೇಂದ್ರ ಮೋದಿಯವರು ಮನೆ ಮನೆಗೆ 24/7 ನಲ್ಲಿ ನೀರು, ಉಜ್ವಲ ಗ್ಯಾಸ್, ಬಡವರಿಗೆ ಮನೆ ಕಟ್ಟಿಸಿದ್ದಾರೆ. ಕೊವಿಡ್ ಸಂದರ್ಭದದಲ್ಲಿ 10 ಕೆಜಿ ಉಚಿತ ಅಕ್ಕಿ ನೀಡಿದ್ದಾರೆ. ಈಗಲೂ ಐದು ಕೆಜಿ ಅಕ್ಕಿ ನರೇಂದ್ರ ಮೋದಿಯವರೇ ಕೊಡುತ್ತಿದ್ದಾರೆ’ ಎಂದರು.

‘ದೇಶದ 130 ಕೋಟಿ ಜನರಿಗೆ ಮೋದಿಯವರು ಉಚಿತ ಲಸಿಕೆ ಕೊಡಿಸಿದ್ದಾರೆ. ಅನ್ನ ಕೊಟ್ಟು, ನೀರು ಕೊಟ್ಟು ಜೀವ ಉಳಿಸಿದ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಹೇಳುವ ಸಮಯ ಬಂದಿದೆ. ಬಿಜೆಪಿಗೆ ಮತ ಹಾಕುವ ಮೂಲಕ ಅವರ ಋಣ ತೀರಿಸಿ’ ಎಂದು ಮನವಿ ಮಾಡಿದರು.

ತಿರುಕಣ್ಣನವರ, ಗುಡಗೂರ, ಹೊನ್ನತ್ತಿ, ಹನುಮಾಪುರ, ದೇವರಗುಡ್ಡ, ಗುಡ್ಡದಾನ್ವೇರಿ ಗ್ರಾಮಸ್ಥರು, ಅಭಿಮಾನಿಗಳು, ಕಾರ್ಯಕರ್ತರು ಇದ್ದರು.

ಲೋಕಸಭೆ ಚುನಾವಣೆ ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ರಾಣೆಬೆನ್ನೂರು ತಾಲ್ಲೂಕಿನ ಸುಕ್ಷೇತ್ರ ದೇವರಗುಡ್ಡದಲ್ಲಿ ರೋಡ್‌ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು.
ಲೋಕಸಭೆ ಚುನಾವಣೆ ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ರಾಣೆಬೆನ್ನೂರು ತಾಲ್ಲೂಕಿನ ಸುಕ್ಷೇತ್ರ ದೇವರಗುಡ್ಡದಲ್ಲಿ ರೋಡ್‌ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT