ಬುಧವಾರ, ಡಿಸೆಂಬರ್ 11, 2019
27 °C

ಅರೇಹಳ್ಳಿ ತೋಟದಲ್ಲಿ ಐದನೇ ಚಿರತೆ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ತಾಲ್ಲೂಕಿನ ಅರೇಹಳ್ಳಿ ಗ್ರಾಮದ ತೋಟದಲ್ಲಿ ಇರಿಸಲಾಗಿದ್ದ ಬೋನಿನಲ್ಲಿ ಸೋಮವಾರ ಮುಂಜಾನೆ ಚಿರತೆ ಸೆರೆಯಾಯಿತು.

ಗ್ರಾಮದ ಮರಿಚಿಕ್ಕೇಗೌಡ ಅವರ ಜಮೀನಿನಲ್ಲಿ ಸೆರೆಯಾದ ಐದನೇ ಚಿರತೆ ಇದಾಗಿದೆ. ಜಮೀನಿಗೆ ಹೊಂದಿಕೊಂಡಂತೆ ಅರಣ್ಯ ಪ್ರದೇಶ ಇದ್ದು, ಅಲ್ಲಿಂದ ಚಿರತೆ ಬರುವುದು ಸಾಮಾನ್ಯವಾಗಿದೆ. ಈಚೆಗೆ ಗ್ರಾಮಕ್ಕೆ ರಾತ್ರಿ ವೇಳೆ ಚಿರತೆಗಳು ನುಗ್ಗುತ್ತಿದ್ದು, ಸಾಕಿಪ್ರಾಣಿಗಳನ್ನು ಹೊತ್ತೊಯ್ಯುತ್ತಿದ್ದವು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಬೋನು ಇರಿಸಿತ್ತು. 

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು, ಬೋನನ್ನು ಸ್ಥಳಾಂತರಿಸಿದರು.‌

ಪ್ರತಿಕ್ರಿಯಿಸಿ (+)