ಜೆಡಿಎಸ್‌ ಅಭ್ಯರ್ಥಿ ಬೆಂಬಲಿಸಲು ಮನವಿ

7

ಜೆಡಿಎಸ್‌ ಅಭ್ಯರ್ಥಿ ಬೆಂಬಲಿಸಲು ಮನವಿ

Published:
Updated:
Deccan Herald

ಕುದೂರು(ಮಾಗಡಿ): ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಆದೇಶದಂತೆ ಕಾರ್ಯಕರ್ತರೆಲ್ಲರ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾ ಪಂಚಾಯಿತಿ ಉಪಚುನಾವಣೆಗೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ಶಾಸಕ ಎ.ಮಂಜುನಾಥ ತಿಳಿಸಿದರು.

ಕುದೂರಿನಲ್ಲಿ ಶುಕ್ರವಾರ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಹೇಮಾವತಿ ನದಿ ನೀರು ಹರಿಸುವ ಕಾಮಗಾರಿ ನಡೆಯುತ್ತಿದೆ. ಪಕ್ಕದ ಕುಣಿಗಲ್‌ ತಾಲ್ಲೂಕಿನ ದೊಡ್ಡಕೆರೆಗೆ ನೀರು ಬಂದಿದೆ. ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನದಿ ನೀರು ಬರುವ ದಿನ ದೂರವಿಲ್ಲ. ಐದು ಕುಂಟೆ ಜಮೀನು ಇರುವ ಸಣ್ಣ ರೈತರಿಗೂ ವ್ಯವಸಾಯ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಸಾಲ ನಿಡುವಂತೆ ಸರ್ಕಾರ ಆದೇಶ ಹೊರಡಿಸಿದೆ ಎಂದರು.

ಸಿದ್ದಗಂಗಾ ಶ್ರೀಗಳ ಜನ್ಮಸ್ಥಳ ವೀರಾಪುರದ ಅಭಿವೃದ್ದಿಗೆ ₹5 ಕೋಟಿ ಮಂಜೂರಾಗಿದ್ದು ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ. ಕುದೂರು ಆಧುನಿಕ ಬಸ್‌ ನಿಲ್ದಾಣದ ಬಗ್ಗೆ ಯಾರೋ ಒಬ್ಬರು ಅಸಮಧಾನ ವ್ಯಕ್ತಪಡಿಸಿರಬಹುದು. ಪುರಜನರೆಲ್ಲರ ಸಹಮತದಂತೆ ಕಾಮಗಾರಿ ಆರಂಭವಾಗಲಿದೆ. ಡಾ.ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸಲಾಗುವುದು ಎಂದು ತಿಳಿಸಿದರು.

‘ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನಾ ಪ್ರಾಧಿಕಾರದಿಂದ ಹಣ ನೀಡಲಾಗಿದೆ. ಮದರಸಕ್ಕೆ ₹4 ಕೋಟಿ ಮಂಜೂರಾಗಿದೆ. ಬೆಟ್ಟದ ತಪ್ಪಲಿನಲ್ಲಿ ನಾಡಕಚೇರಿ, ಅಂಬೇಡ್ಕರ್‌ ಭವನ ನಿರ್ಮಿಸಲಾಗುವುದು. ಜೆಡಿಎಸ್‌ ಪಕ್ಷದ ಅಭ್ಯರ್ಥಿಯತ್ತ ಮತದಾರರ ಒಲವು ಇದೆ . ನಿಮ್ಮ ಸೇವೆ ಮಾಡುವ ನಮ್ಮನ್ನು ಬೆಂಬಲಿಸಿ’ ಎಂದು ಮನವಿ ಮಾಡಿದರು.

ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ ಮಾತನಾಡಿ, ‘ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮತದಾರರಿಗೆ ಸ್ಪಂದಿಸುವವರನ್ನು ಅಭ್ಯರ್ಥಿಯನ್ನಾಗಿ ಮಾಡುತ್ತೇವೆ’ ಎಂದರು.

ಜೆಡಿಎಸ್‌ ಮುಖಂಡ ವೀರಪ್ಪ ಮಾತನಾಡಿ, ಗ್ರಾಮದಲ್ಲಿ 3 ಲಕ್ಷ ಜನಸಂಖ್ಯೆ ಇದೆ. ಬಹಳ ಕಾಲದಿಂದಲೂ ಕುದೂರು ತಾಲ್ಲೂಕು ಕೇಂದ್ರ ಮಾಡಬೇಕು ಎಂಬ ಹೋರಾಟ ನಡೆದಿತ್ತು ಎಂದರು.

ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಎಂ.ರಾಮಣ್ಣ, ಮುಖಂಡರಾದ ಲಕ್ಷ್ಮೀಮಂಜುನಾಥ, ಗಿರಿಯಪ್ಪ, ತಾವರೆಕೆರೆ ಜಗಧೀಶ್‌, ಪಂಚಾಕ್ಷರಿ, ಜುಟ್ಟನಹಳ್ಳಿ ಜಯರಾಮ್‌, ಮರೂರು ವೆಂಕಟೇಶ್‌, ರಾಘವೇಂದ್ರ ಮಾತನಾಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !