ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತಾಪುರ | ಚುನಾವಣಾ ಕರ್ತವ್ಯಕ್ಕೆ 1,228 ಸಿಬ್ಬಂದಿ, 89 ವಾಹನ

ಶಾಂತಿಯುತ ಮತದಾನಕ್ಕೆ ಬಿಗಿ ಬಂದೋಬಸ್ತ್
Published 6 ಮೇ 2024, 13:44 IST
Last Updated 6 ಮೇ 2024, 13:44 IST
ಅಕ್ಷರ ಗಾತ್ರ

ಚಿತ್ತಾಪುರ: ಲೋಕಸಭೆ ಚುನಾವಣೆಗೆ ಚಿತ್ತಾಪುರ ವಿಧಾನಸಭೆ ವ್ಯಾಪ್ತಿಯಲ್ಲಿ ಮೇ.7 ರಂದು ನಡೆಯಲಿರುವ ಮತದಾನಕ್ಕೆ ತಾಲ್ಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

256 ಮತಗಟ್ಟೆಗಳಲ್ಲಿ ನಡೆಯುವ ಮತದಾನ ಕರ್ತವ್ಯಕ್ಕೆಂದು ಮತಗಟ್ಟೆಗಳಿಗೆ 1,228 ಸಿಬ್ಬಂದಿ ನೇಮಕ ಹಾಗೂ 89 ವಾಹನಗಳ ವ್ಯವಸ್ಥೆ ಮಾಡಿಕೊಂಡು, ಸೋಮವಾರ ಮತಗಟ್ಟೆ ಅಧಿಕಾರಿಗಳಿಗೆ ಮತದಾನ ಸಾಮಾಗ್ರಿ ವಿತರಣೆ ಮಾಡಲಾಯಿತು.

ಚಿತ್ತಾಪುರ ತಾಲ್ಲೂಕು ಹಾಗೂ ಕಾಳಗಿ, ಶಹಾಬಾದ್ ತಾಲ್ಲೂಕಿನ ಭಾಗಶಃ ಗ್ರಾಮಗಳು ಒಳಗೊಂಡಂತೆ ಒಟ್ಟು 256 ಮತಗಟ್ಟೆಗಳ ವ್ಯಾಪ್ತಿಯಲ್ಲಿ 1,23,063 ಪುರುಷ ಮತದಾರ, 1,23,910 ಮಹಿಳಾ ಮತದಾರ, ಇತರೆ 16, ಒಟ್ಟು 2,46,989 ಮತದಾರರು ಚುನಾವಣೆಯಲ್ಲಿ ತಮ್ಮ ಮತ ಹಕ್ಕು ಚಲಾಯಿಸಲಿದ್ದಾರೆ.

78 ಸೂಕ್ಷ್ಮ ಮತಗಟ್ಟೆಗಳಿವೆ. ಸಖಿ ಮತಗಟ್ಟೆ-5, ಅಂಗವಿಕಲ ಮತಗಟ್ಟೆ-1, ಯುವ ಮತದಾರ ಮತಗಟ್ಟೆ-1, ಥೀಮ್ ಮತಗಟ್ಟೆ-1, ಹೀಗೆ ವಿಶೇಷವಾಗಿ ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿದೆ. ಮತದಾನಕ್ಕಾಗಿ ಕಂಟ್ರೋಲ್ ಯುನಿಟ್-348, ಬ್ಯಾಲೆಟ್ ಯುನಿಟ್-348, ವಿವಿಪ್ಯಾಟ್-368 ಯಂತ್ರಗಳು ಬಂದಿವೆ. ಮತಗಟ್ಟೆಯಲ್ಲಿ ಕರ್ತವ್ಯಕ್ಕೆಂದು ಪಿಆರ್‌ಒ-307, ಎಪಿಆರ್‌ಒ-307, ಪಿಒ-614, ಒಟ್ಟು 1,228 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ.

ಪಟ್ಟಣದ ಹೊರವಲಯದಲ್ಲಿರುವ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಮತಯಂತ್ರಗಳು ಇಡಲಾಗಿದೆ. ಮತದಾನದ ದಿವಸ ಚುನಾವಣೆ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಮತದಾನ ಸಾಮಾಗ್ರಿ ತೆಗೆದುಕೊಂಡು ನಿಯೋಜಿತ ತಮ್ಮ ಮತಗಟ್ಟೆಗಳಿಗೆ ಹೋಗಿ ಬರಲೆಂದು 39ಬಸ್, 50 ಕ್ರೂಸರ್, ಒಟ್ಟು 89 ವಾಹನಗಳ ವ್ಯವಸ್ಥೆ ಮಾಡಲಾಗಿದೆ.

ಬಿಗಿ ಪೊಲೀಸ್ ಬಂದೋಬಸ್ತ್: ಮತದಾನದಲ್ಲಿ ಅಹಿತಕರ ಘಟನೆಗಳ ಜರುಗದಂತೆ ಮುನ್ನೆಚ್ಚರಿಕೆ ವಹಿಸಿ ಪ್ರತಿಯೊಂದು ಮತಗಟ್ಟೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಡಿವೈಎಸ್ಪಿ-1, ಸಿಪಿಐ-3, ಪಿಎಸ್ಐ/ಎಎಸ್ಐ-20, ಹೆಡ್ ಕಾನ್ಸಟೇಬಲ್-86, ಪೊಲೀಸ್ ಕಾನ್ಸಟೇಬಲ್-13, 33 ಹೆಚ್ಚುವರಿ ಸಿಬ್ಬಂದಿ ಸೇರಿದಂತೆ ಒಟ್ಟು 380 ಪೊಲೀಸ್ ಸಿಬ್ಬಂದಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಳಿಸಲಾಗಿದೆ. ಸಿಪಿಎಂಎಫ್-1 ತುಕಡಿ, ಕೆಸ್ಆರ್‌ಪಿ ತುಕಡಿ-1 ವ್ಯವಸ್ಥೆ ಮಾಡಲಾಗಿದೆ ಎಂದು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್ ತಿಳಿಸಿದರು.

ಮತದಾನ ಸಾಮಾಗ್ರಿ ರವಾನೆ: ಪಟ್ಟಣದ ಹೊರವಲಯದಲ್ಲಿನ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೋಮವಾರ ಮತದಾನ ನಡೆಯಲಿರುವ 256 ಮತಗಟ್ಟೆಗಳಿಗೆ ಮತದಾನ ಸಾಮಾಗ್ರಿ ವಿತರಣೆ ಮಾಡಲಾಯಿತು.

ಮತಗಟ್ಟೆಗೆ ನೇಮಕವಾದ ಅಧಿಕಾರಿ ಮತ್ತು ಸಿಬ್ಬಂದಿಗಳು ಮತಯಂತ್ರ ಸಹಿತಿ ಮತದಾನಕ್ಕೆ ಅಗತ್ಯ ಸಾಮಾಗ್ರಿ ತೆಗೆದುಕೊಂಡು ಮತಗಟ್ಟೆಗೆ ತೆರಳಿದರು. ಮತಗಟ್ಟೆಗೆ ನೇಮಕವಾದ ಅಧಿಕಾರಿ ಮತ್ತು ಸಿಬ್ಬಂದಿಗೆ ಕೇಸರಿಬಾತ್‌, ಉಪ್ಪಿಟ್ಟು, ಗೋಧಿ ಹುಗ್ಗಿ, ಪಲ್ಲಾವ್, ಸಾಂಬಾರ್, ಮಜ್ಜಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಚಿತ್ತಾಪುರ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಿಗೆ ನೇಮಕವಾದ ಪೊಲೀಸ್ ಸಿಬ್ಬಂದಿಗೆ ಮತದಾನ ದಿನ ವಹಿಸಬೇಕಾದ ಮುನ್ನೆಚ್ಚರಿಕೆ ಕುರಿತು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಅವರು ಮಾಹಿತಿ ನೀಡಿದರು.
ಚಿತ್ತಾಪುರ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಿಗೆ ನೇಮಕವಾದ ಪೊಲೀಸ್ ಸಿಬ್ಬಂದಿಗೆ ಮತದಾನ ದಿನ ವಹಿಸಬೇಕಾದ ಮುನ್ನೆಚ್ಚರಿಕೆ ಕುರಿತು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT