ಅಪಘಾತದಿಂದಾಗಿ ಆಗುತ್ತಿರುವ ಸಾವು–ನೋವಿನ ಪ್ರಮಾಣ ಗಮನಿಸಿದ್ದ ಕೆಕೆಆರ್‌ಟಿಸಿ, ನೌಕರರು ಅಪಘಾತದಿಂದಾಗಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ, ಅಂಗನ್ಯೂನತೆಗೆ ಒಳಗಾದಲ್ಲಿ ಸಿಬ್ಬಂದಿಗೆ ಗಣನೀಯ ಮೊತ್ತದಷ್ಟು ಹಣ ಒದಗಿಸಲು 2022ರ ಡಿಸೆಂಬರ್ 2ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ಕಾರ್ಪೊರೇಟ್ ಸಂಬಳ ಪ್ಯಾಕೇಜ್(ಸಿಎಸ್‌ಪಿ) ಯೋಜನೆ ಸೌಲಭ್ಯ ನೀಡಲು ಒಪ್ಪಂದ ಮಾಡಿಕೊಂಡಿತ್ತು. ಇಂದೊಂದು ಪ್ರೀಮಿಯಂ ರಹಿತ ಉಚಿತ ಪಾಲಿಸಿಯಾಗಿದ್ದು, ಎಸ್‌ಬಿಐನಲ್ಲಿ ವೇತನ ಖಾತೆ ಹೊಂದಿರುವ ಸಿಬ್ಬಂದಿ ಈ ಪಾಲಿಸಿ ಪಡೆಯುತ್ತಾರೆ. ಅದರಂತೆ 2023ರ ಜನವರಿ 1ರಿಂದ ಈತನಕ ಸಂಭವಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗ ಪರಿಹಾರ ಜಮೆ ಮಾಡಲಾಗಿದೆ.