ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ: ಬೆಳೆ ಪರಿಹಾರಕ್ಕಾಗಿ ರೈತರ ಅಲೆದಾಟ

Published 16 ಮೇ 2024, 15:43 IST
Last Updated 16 ಮೇ 2024, 15:43 IST
ಅಕ್ಷರ ಗಾತ್ರ

ಅಫಜಲಪುರ: ಕಳೆದ ವರ್ಷ ಮಳೆ ಇಲ್ಲದೆ ಬೆಳೆ ಹಾಳಾದ ರೈತರಿಗೆ ಸರ್ಕಾರ 15 ದಿನಗಳ ಹಿಂದೆ ಬೆಳೆ ಪರಿಹಾರ ನೀಡಿದೆ. ಇನ್ನೂ ಸಾಕಷ್ಟು ರೈತರಿಗೆ ಬೆಳೆ ಪರಿಹಾರ ಬಾರದ ಕಾರಣ ರೈತರು ನಿತ್ಯ ಕೃಷಿ ಮತ್ತು ತಹಶೀಲ್ದಾರ್‌ ಕಚೇರಿಗೆ ಅಲೆದಾಡುತ್ತಿದ್ದಾರೆ. ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಪರಿಹಾರ ಸಹಾಯವಾಣಿ ಆರಂಭಿಸಲಾಗಿದೆ. ಅಲ್ಲಿಯೂ ರೈತರು ನಿತ್ಯ ಬರುತ್ತಿದ್ದು ಸಂಜೆವರೆಗೂ ಪರಿಹಾರಕ್ಕಾಗಿ ನಿಂತು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಯಾವ ರೈತರಿಗೆ ರಾಜ್ಯ ಸರ್ಕಾರದಿಂದ ₹2 ಸಾವಿರ ಪರಿಹಾರ ಬಂದಿಲ್ಲವೋ ಅವರಿಗೆ ಕೇಂದ್ರದ ಕಿಸಾನ್‌ ಸಮ್ಮಾನ್‌ ಹಣ ಕೂಡ ಜಮೆಯಾಗಿಲ್ಲ. ಅದಕ್ಕಾಗಿ ರೈತರು ನಿತ್ಯ ಪರಿಹಾರಕ್ಕಾಗಿ ಅಲೆದಾಡುವುದು ಸಾಮಾನ್ಯವಾಗಿದೆ. ‘ರೈತರು ಪಹಣಿಯನ್ನು ಆಧಾರಕ್ಕೆ ಲಿಂಕ್ ಮಾಡಿಸಬೇಕು. ರೈತರ ಆಧಾರ್ ಕಾರ್ಡ್‌ದಲ್ಲಿರುವ ಹೆಸರು ಮತ್ತು ಬ್ಯಾಂಕ್ ಖಾತೆಯಲ್ಲಿ ಇರುವ ಹೆಸರು ಒಂದೇ ಆಗಿರಬೇಕು. ಅಲ್ಲದೇ ಆಧಾರ್ ಕಾರ್ಡ್‌ದಲ್ಲಿ ಹಾಗೂ ಪಹಣಿ ಪತ್ರಿಕೆಯಲ್ಲಿ ಹೆಸರು ಒಂದೇ ಆಗಿರಬೇಕು. ಬದಲಾವಣೆ ಆದರೆ ಪರಿಹಾರದ ಹಣ ಜಮೆ ಆಗುವುದಿಲ್ಲ. ಅಲ್ಲದೆ ರೈತರು ಜಮೀನಿನ ಪಹಣಿಗೆ ಎಫ್‌ಐಡಿ ಸಂಖ್ಯೆ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಬೇಕು. ಇಲ್ಲದೇ ಇದ್ದರೆ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿಯಾಗಿ ಅವಶ್ಯಕ ದಾಖಲೆಗಳನ್ನು ನೀಡಿ ಎಫ್‌ಐಡಿ ಸಂಖ್ಯೆ ಪಡೆಯಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್.ಗಡಿಗಿಮನಿ ತಿಳಿಸಿದರು.

ಇನ್ನೂ ಕೆಲವು ರೈತರ ಬೆಳೆ ಪರಿಹಾರ ಉಳಿತಾಯ ಖಾತೆಗೆ ಜಮೆ ಆಗದೇ ಸಾಲದ ಖಾತೆಗೆ ಜಮೆ ಆಗಿದ್ದರಿಂದ ರೈತರು ಮತ್ತಷ್ಟು ಕಂಗಾಲಾಗಿದ್ದಾರೆ. ‘ಮಳೆ ಇಲ್ಲ, ಬೆಳೆ ಹಾಳಾಗಿದೆ. ಪರಿಹಾರದ ಹಣವನ್ನು ಸಾಲದ ಖಾತೆಗೆ ಜಮೆ ಮಾಡಿದರೆ ನಾವು ಹೇಗೆ ಮಾಡಬೇಕು. ಬ್ಯಾಂಕಿನವರನ್ನು ವಿಚಾರಿಸಿದರೆ ಬೆಳೆ ಸಾಲ ಕಟ್ಟಿ, ಆಮೇಲೆ ನಿಮ್ಮ  ಉಳಿತಾಯ ಖಾತೆಗೆ ಪರಿಹಾರದ ಹಣ ಜಮಾ ಮಾಡುತ್ತೇವೆ ಎನ್ನುತ್ತಾರೆ’ ಎಂದು ಸಿದ್ದನೂರು ಗ್ರಾಮದ ರೈತರಾದ ಬೀರಣ್ಣ ಹೇರೂರ, ಮೆಹಬೂಬ್ ಸಾಬ್ ನದಾಫ್, ಭೀಮಶಂಕರ್ ಹೇರೂರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT