ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25ರಂದು ‘ಧರ್ಮಪ್ರಜೆ’ ಪ್ರಶಸ್ತಿ ಪ್ರದಾನ

Last Updated 23 ಡಿಸೆಂಬರ್ 2020, 4:01 IST
ಅಕ್ಷರ ಗಾತ್ರ

ಕಲಬುರ್ಗಿ: ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಅವರ 84ನೇ ಜನ್ಮದಿನದ ಪ್ರಯುಕ್ತ ವಿಶ್ವಜ್ಯೋತಿ ಪ್ರತಿಷ್ಠಾನವು ಡಿ.25ರಂದು ನಗರದ ಶಹಾಬಜಾರ್‌ದಲ್ಲಿರುವ ಸುಲಫಲ ಮಠದಲ್ಲಿ ‘ಧರ್ಮಪ್ರಜೆ’ ಪ್ರಶಸ್ತಿ ಪ್ರದಾನ ಆಯೋಜಿಸಲಾಗಿದೆ ಎಂದುಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಹಾಗೂ ಸಂಚಾಲಕ ಬಿ.ಎಂ.ಪಾಟೀಲ ಕಲ್ಲೂರ ತಿಳಿಸಿದ್ದಾರೆ.

ಧರ್ಮಸಿಂಗ್‍ರ ಕಟ್ಟಾ ಅನುಯಾಯಿಗಳಾದ ಶಾಂತಗೌಡ ದುಮ್ಮದ್ರಿ, ಸಂಗಣ್ಣ ದೇಸಾಯಿ (ಅಲ್ಲಾಗೋಳ) ನೆಲೋಗಿ, ದೇವೀಂದ್ರಪ್ಪ ಪೂಜಾರಿ ಬಿರಾಳ, ಚಂದ್ರಿಕಾ ಪರಮೇಶ್ವರ, ಅಮೀರ್ ಜಮಾದಾರ, ತಿಪ್ಪಣ್ಣ ನಾಯ್ಕೋಡಿ ಕಟ್ಟಿ ಸಂಗಾವಿ ಅವರನ್ನು ‘ಧರ್ಮಪ್ರಜೆ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

25ರ ಬೆಳಿಗ್ಗೆ 9.45ಕ್ಕೆ ನಗರದ ಸುಲಫಲ ಮಠದಲ್ಲಿ ಸಾರಂಗಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗಲಿರುವ ಸಮಾರಂಭದಲ್ಲಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಉದ್ಯಮಿ ಕೃಷ್ಣಾಜೀ ಕುಲಕರ್ಣಿ, ಜೇವರ್ಗಿ ತಾಲ್ಲೂಕು ನಿವಾಸಿಗಳ ಸಂಘದ ಅಧ್ಯಕ್ಷ ವಿಜಯಕುಮಾರ ದುದ್ದಗಿ ಮಳ್ಳಿ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT