ಚಿಂಚೋಳಿ: ತಾಲ್ಲೂಕಿನಲ್ಲಿ ಮಳೆಯಿಂದ ರಸ್ತೆ, ಕಟ್ಟಡಗಳು ಹಾಗೂ ಇನ್ನಿತರ ಆಸ್ತಿಪಾಸ್ತಿಗಳಿಗೆ ಉಂಟಾದ ಹಾನಿ ಸರಿಪಡಿಸಲು ಸರ್ಕಾರಕ್ಕೆ ವಿವಿಧ ಇಲಾಖೆಗಳು ಕೇಳಿದ್ದು ಸುಮಾರು ₹85 ಕೋಟಿಗೂ ಅಧಿಕ ಆದರೆ ಈವರೆಗೂ ನಯ್ಯಾಪೈಸೆ ಹಣ ಬಿಡುಗಡೆಯಾಗಿಲ್ಲ. ಅನುದಾನಕ್ಕೆ ಅಧಿಕಾರಿಗಳು ಮತ್ತು ನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಮುಕ್ತಿ ಯಾವಾಗ ಸಿಗುತ್ತೆ ಎಂದು ಜನ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ತಾಲ್ಲೂಕಿನಲ್ಲಿ ಉಮ್ಮರ್ಗಾ ಸುಲೇಪೇಟ ರಾಜ್ಯ ಹೆದ್ದಾರಿ–32, ರಾಯಚೂರು ವನ್ಮಾರಪಳ್ಳಿ ರಾಜ್ಯ ಹೆದ್ದಾರಿ –15, ಶಹಾಪುರ ಶಿವರಾಂಪುರ ರಾಜ್ಯ ಹೆದ್ದಾರಿ –149, ಚಿಂಚೋಳಿ ಭಾಲ್ಕಿ ರಾಜ್ಯ ಹೆದ್ದಾರಿ –75 ಮತ್ತು ಮುರ್ಕಿ ಹಂದರಕಿ ರಾಜ್ಯ ಹೆದ್ದಾರಿ–122 ಹಾಗೂ ಹಲವು ಜಿಲ್ಲಾ ಮುಖ್ಯರಸ್ತೆಗಳು ಲೋಕೋಪಯೋಗಿ ಇಲಾಖೆ ಆಧೀನದಲ್ಲಿವೆ.

ರಾಜ್ಯ ಹೆದ್ದಾರಿ 15ರ ದಸ್ತಾಪುರದಿಂದ ಶಿರೋಳ್ಳಿವರೆಗೆ, ರಾಜ್ಯ ಹೆದ್ದಾರಿ 149ರ ಕುಂಚಾವರಂ ಕ್ರಾಸ್ ಶಾದಿಪುರ, ಭಕ್ತಂಪಳ್ಳಿ ಕುಂಚಾವರಂ ಕ್ರಾಸ್, ರಾಜ್ಯ ಹೆದ್ದಾರಿ 75ರ ಚಿಮ್ಮಾಈದಲಾಯಿ ಕ್ರಾಸ್ ಐನಾಪುರ ರಸ್ತೆಗಳು ಮತ್ತು ಸೇತುವೆಗಳು ಹಾಳಾಗಿವೆ ಆದರೆ ಇವುಗಳ ಪುನರ್ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆ ₹45 ಕೋಟಿಗೆ ಪ್ರಸ್ತಾವ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಗ್ರಾಮೀಣ ರಸ್ತೆ, ಕಿರು ಸೇತುವೆಗಳು ಹಾಳಾಗಿವೆ. ಇವುಗಳ ಪುನರ್ ನಿರ್ಮಾಣಕ್ಕೆ ಅಂದಾಜು ₹35 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಸಣ್ಣ ನೀರಾವರಿ ಇಲಾಖೆಯ ಚಿಕ್ಕಲಿಂಗದಳ್ಳಿ, ತುಮಕುಂಟಾ ಕೆರೆಗಳು ಮತ್ತು ಬೇರೆ ಕೆರೆಗಳ ಕಾಲುವೆಗಳು ಮತ್ತಿತರ ಹಾನಿ ಹಿನ್ನಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ₹7.5 ಕೋಟಿಗೆ ಬೇಡಿಕೆ ಸಲ್ಲಿಸಲಾಗಿದೆ. ಜೆಸ್ಕಾಂಗೆ ₹27 ಲಕ್ಷ ಹಾನಿಯಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸುಮಾರು 22 ಶಾಲೆಗಳ 45 ಕೊಠಡಿಗಳು ಮಳೆಯಿಂದ ಹಾನಿಗೊಳಗಾಗಿದ್ದು ಇವುಗಳ ದುರಸ್ತಿಗಾಗಿ ₹2.59 ಕೋಟಿಗೆ ಬೇಡಿಕೆ ಸಲ್ಲಿಸಲಾಗಿದೆ. ಅಂಗನವಾಡಿ ಕೇಂದ್ರಗಳು ಮಳೆಯಿಂದ ದುರಸ್ತಿಗಾಗಿ ಕಾಯುತ್ತಿವೆ.

ತಾಲ್ಲೂಕಿನಲ್ಲಿ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳು, ವಿಪಕ್ಷದವರು ಮಳೆಹಾನಿ ವೀಕ್ಷಿಸಿದ್ದೇ ದೊಡ್ಡ ಸಾಧನೆ ಎನ್ನುವಂತಾಗಿದೆ. ಆದರೆ ಈವರೆಗೂ ಯಾವ ಇಲಾಖೆಗೂ ಅನುದಾನ ಬಿಡುಗಡೆಯಾಗಿಲ್ಲ.
ತಾಲ್ಲೂಕಿನಲ್ಲಿ ಏಪ್ರಿಲ್ನಿಂದ ಈವರೆಗೆ 75 ಮನೆಗಳಿಗೆ ಮಳೆಯಿಂದ ಹಾನಿಯಾಗಿದ್ದು, 26 ಮನೆಗಳಿಗೆ ಪರಿಹಾರ ನೀಡಲಾಗಿದೆ. ಇನ್ನೂ 49 ಮನೆಗಳ ಪರಿಹಾರ ಸಂತ್ರಸ್ತರಿಗೆ ಬಂದಿಲ್ಲ. ಉಪ ವಿಭಾಗಾಧಿಕಾರಿಗಳ ಅನುಮೋದನೆ 40 ಮನೆಗಳ ವರದಿ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕ ತಕ್ಷಣ ಶೀಘ್ರವೇ ಹಣ ಜಮಾ ಆಗಲಿದೆ. ಜತೆಗೆ ಮನೆಗಳಿಗೆ ಸುಮಾರು 300ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ ಇವರಿಗೂ ಪರಿಹಾರ ದೊರೆಯಬೇಕಿದೆ. ಜಾನುವಾರುಗಳ ಸಾವಿಗೆ ಸಂಬಂಧಿಸಿದಂತೆ ಬಹುತೇಕ ಪರಿಹಾರ ನೀಡಲಾಗಿದೆ ಹೊರ ಪ್ರಕರಣಗಳು ಮಾತ್ರ ಬಾಕಿಯಿವೆ ಎಂಬುದು ಕಂದಾಯ ಇಲಾಖೆಯ ಮೂಲಗಳ ವಿವರಣೆಯಾಗಿದೆ.

ವಿಪತ್ತು ನಿರ್ವಹಣೆಗೆ ಹಣದ ಅಭಾವವಿಲ್ಲ. ಮಳೆಯಿಂದ ಮನೆಗಳು ಹಾಳಾಗಿದ್ದಕ್ಕೆ ನೀರು ನುಗ್ಗಿದ್ದಕ್ಕೆ ಮತ್ತು ಜಾನುವಾರುಗಳು ಮೃತಪಟ್ಟಿದಕ್ಕೆ ಪರಿಹಾರ ನೀಡಲಾಗಿದೆ
ಸುಬ್ಬಣ್ಣ ಜಮಖಂಡಿ ತಹಶೀಲ್ದಾರ್ ಚಿಂಚೋಳಿ

ಸೇತುವೆಗೂ ಬಾರದ ಹಣ

ಮಿರಿಯಾಣ ಭೈರಂಪಳ್ಳಿ ಸಂಪರ್ಕ ಬೆಸೆಯುವ ಸೇತುವೆ ಸಂಪೂರ್ಣ ಕೊಚ್ಚಿಕೊಂಡು ಹೋಗಿತ್ತು ಇದರಿಂದ ಕೆಲ ಗ್ರಾಮಗಳು ಸಂಪರ್ಕ ಕಡಿದುಕೊಂಡಿದ್ದವು. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯವರು ತುರ್ತಾಗಿ ತಾತ್ಕಾಲಿಕ ಸೇತುವೆ ಪುನರ್ ನಿರ್ಮಿಸಿದ್ದಾರೆ. ಆದರೆ ಇದಕ್ಕೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.