ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ: ನೀರಾವರಿ ಪರಿಕರಗಳ ವಿತರಣೆ

Last Updated 11 ಫೆಬ್ರುವರಿ 2022, 4:48 IST
ಅಕ್ಷರ ಗಾತ್ರ

ಅಫಜಲಪುರ: ‘ಸರ್ಕಾರ ಶೇ.90 ಸಹಾಯ ಧನದಲ್ಲಿ ತುಂತುರು ನೀರಾವರಿ ಪರಿಕರಗಳನ್ನು ನೀಡಲಾಗುತ್ತಿದೆ. ಅವುಗಳನ್ನು ರೈತರು ಸರಿಯಾಗಿ ಬಳಸಿಕೊಂಡು ಅದರ ಪ್ರಯೋಜನೆ ಪಡೆದುಕೊಳ್ಳಬೇಕು’ ಎಂದು ಅಫಜಲಪುರ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಅರವಿಂದ ಕುಮಾರ ರಾಠೋಡ ತಿಳಿಸಿದರು.

ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಗುರುವಾರ ಪರಿಶಿಷ್ಟ ವರ್ಗದವರಿಗೆ ತುಂತುರು ನೀರಾವರಿ ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು, ಪರಿಕರಗಳನ್ನು ಉಪಯೋಗಿಸಿದ ನಂತರ ನೆರಳಲ್ಲಿ ಕೂಡಿ ಹಾಕಬೇಕು, ಇದರಿಂದ ಹೆಚ್ಚು ಬಾಳಿಕೆ ಬರುತ್ತವೆ.

ಸಹಾಯಧನದಲ್ಲಿ ಒಂದು ಬಾರಿ ಕೃಷಿ ಸೌಲಭ್ಯ ಪಡೆದರೆಮುಂದಿನ 5 – 6 ವರ್ಷಗಳವರೆಗೆ ಸೌಲಭ್ಯ ದೊರೆಯುವದಿಲ್ಲ, ಅದಕ್ಕಾಗಿ ಸರಿಯಾಗಿ ಉಪಯೋಗಿಸಿಕೊಳ್ಳಬೇಕು’ ಎಂದು ಅವರು ತಿಳಿಸಿದರು.

ರೈತ ಮುಖಂಡರಾದ ರಮೇಶ ಶಂಕರ ರಾಠೋಡ, ಹೀರು ರಾಠೋಡ, ಅನುವುಗಾರ ಸುಭಾಷ ಕಾಂಬಳೆ ಸೇರಿದಂತೆ ಗ್ರಾಮಸ್ಥರು, ರೈತರುಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT