ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಫಜಲಪುರ: ಕೊರಬು ಫೌಂಡೇಶನ್‌ನಿಂದ ಕುಡಿಯುವ ನೀರು ಪೂರೈಕೆ

Published 2 ಜೂನ್ 2024, 15:46 IST
Last Updated 2 ಜೂನ್ 2024, 15:46 IST
ಅಕ್ಷರ ಗಾತ್ರ

ಅಫಜಲಪುರ: ‘ಮಾಶಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಸುಮಾರು ಹತ್ತು ಸಾವಿರ ಜನಸಂಖ್ಯೆ ಇದೆ. ಇದನ್ನು ಅರಿತು ಟ್ಯಾಂಕರ್‌ ಮೂಲಕ ದಿನಾಲು ಉಚಿತ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಗ್ರಾಮದ ಮುಖಂಡ ಜೆ.ಎಂ. ಕೊರಬು ಅವರ ಕಾರ್ಯ ಮಾದರಿಯಾಗಿದೆ ಎಂದು ಮರುಳಾರಾಧ್ಯ ಶಿವಾಚಾರ್ಯರು ತಿಳಿಸಿದರು.

ಮಾಶಾಳ ಗ್ರಾಮದ ಚೌಡೇಶ್ವರಿ ಜಾತ್ರಾ ಮಹೋತ್ಸವ ಅಂಗವಾಗಿ ಮತ್ತು ನೀರಿನ ಸಮಸ್ಯೆ ನಿರ್ಮೂಲನೆಗಾಗಿ ಜೆ.ಎಂ.ಕೊರಬು‌ ಫೌಂಡೇಶನ್ ವತಿಯಿಂದ 4 ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಚಾಲನೆ ನೀಡಿ ಮಾತನಾಡಿ, ‘ಕಳೆದ ವರ್ಷ ಮಳೆ ಆಗದ ಕಾರಣ ಅಂತರ್ಜಲ ಮಟ್ಟ ಬತ್ತಿ ಹೋಗಿದೆ. ಸರ್ಕಾರಿ ಕೊಳವೆಬಾವಿಗಳು ಬತ್ತಿ ಹೋಗಿವೆ. ಹೀಗಾಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿತ್ತು ಎಂದು ಅವರು ತಿಳಿಸಿದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಜೆ.ಎಂ.ಕೊರಬು ಮಾತನಾಡಿ, ‘ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಸದ್ಯ 4 ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಈಗ ಗ್ರಾಮದಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಇರುವುದರಿಂದ ಗ್ರಾಮಸ್ಥರ ಬೇಡಿಕೆಯಂತೆ ನೀರು ಸರಬರಾಜು ಮಾಡಲಾಗುತ್ತಿದೆ. ಶಾಸಕರ ಜತೆ ಚರ್ಚಿಸಿ ಶಾಶ್ವತವಾಗಿ ಗ್ರಾಮದ ನೀರಿನ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.

 ಮುಖಂಡ ಮಕ್ಬೂಲ್ ಶೇಖ್ ಮಾತನಾಡಿದರು.

ಬಸವರಾಜ ಚಾಂದಕವಟೆ,ಜ್ಞಾನೇಶ್ವರಿ ಪಾಟೀಲ್, ರಾಜಕುಮಾರ ಬಬಲಾದ, ಶಿವರುದ್ರಪ್ಪ ಅವಟೆ, ಅಣ್ಣಪ್ಪ ಶಿವಗೊಂಡ, ರವಿದಾಸ ರಾಠೋಡ, ದುಂಡು ಗೌಡಗೌಂವ, ಉಮೇಶ್ ಕೌಟಗಿ, ಶಾಂತಯ್ಯ ಝಳಕಿ, ದಯಾನಂದ ಪಾರಗೊಂಡ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT