ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: 18 ಕಿ.ಮೀ ದೂರ ಕ್ರಮಿಸಿ ಮತದಾನ!

ಧಾವಜಿ ನಾಯಕ ತಾಂಡಾ: 5 ವರ್ಷದಲ್ಲಿ 1 ಮತಗಟ್ಟೆ ಹೆಚ್ಚಳ
Published 22 ಏಪ್ರಿಲ್ 2024, 6:05 IST
Last Updated 22 ಏಪ್ರಿಲ್ 2024, 6:05 IST
ಅಕ್ಷರ ಗಾತ್ರ

ಚಿಂಚೋಳಿ: ಸ್ಥಳೀಯ ವಿಧಾನಸಭಾ ಮತಕ್ಷೇತ್ರದಲ್ಲಿ ವಿವಿಧ ತಾಂಡಾವಾಸಿಗಳು ಮತಗಟ್ಟೆಯಿಲ್ಲದ ಕಾರಣ ಹಕ್ಕು ಚಲಾಯಿಸಲು ಕನಿಷ್ಠ 2ರಿಂದ 18 ಕಿ.ಮೀ ದೂರ ತೆರಳಿ ಮತದಾನ ಮಾಡುವ ಸ್ಥಿತಿ ಎದುರಾಗಿದೆ.

ಇಲ್ಲಿನ ನರನಾಳ ಗ್ರಾಮದ ಬಳಿಯ ಧಾಮಜಿ ನಾಯಕ ತಾಂಡಾವಾಸಿಗಳು ಮೋಘಾ ಗ್ರಾಮದ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕಿದೆ. ಈ ತಾಂಡಾ ಮೋಘಾದಿಂದ 5 ಕಿ.ಮೀ ಅಂತರದಲ್ಲಿದೆ. ಆದರೆ ಮೋಘಾದಿಂದ ಇಲ್ಲಿಗೆ ರಸ್ತೆ ಇಲ್ಲದ ಕಾರಣ ತಾಂಡಾ ಜನರು ನರನಾಳ, ರಾಣಾಪುರ ತಾಂಡಾ ಕ್ರಾಸ್, ಸಾಸರಗಾಂವ್ ಕ್ರಾಸ್, ಸಾಸರಗಾಂವ್, ರುಮ್ಮನಗೂಡ ಮೂಲಕ ಮೋಘಾ ಗ್ರಾಮ ತಲುಪಿ ಮತದಾನ ಮಾಡವುದು ಅನಿವಾರ್ಯವಾಗಿದೆ.

ಮೋಘಾ ಕಾಳಗಿ ತಾಲ್ಲೂಕಿನಲ್ಲಿದೆ ಅದರಂತೆ ಈ ತಾಂಡಾ ಕೂಡ ಅದೇ ಗ್ರಾಮಕ್ಕೆ ಸೇರುತ್ತದೆ. ಆದರೆ ಈ ತಾಂಡಾ ಭೌಗೋಳಿಕವಾಗಿ ನರನಾಳ್ ಗ್ರಾಮದಿಂದ ಕೇವಲ 1.5 ಕಿ.ಮೀ ದೂರದಲ್ಲಿದೆ. ಇದರಿಂದ ತಾಂಡಾವಾಸಿಗಳು ನರನಾಳ ಮತಗಟ್ಟೆಯಲ್ಲಿ ತಮ್ಮ ಹೆಸರು ಸೇರಿಸಲು ಮುಂದಾಗಿದ್ದರು ಇದಕ್ಕೆ ಗ್ರಾಮದ ಕೆಲವರು ವಿರೋಧಿಸಿದ್ದರಿಂದ ಮೇ 7ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಧಾವಜಿ ನಾಯಕ ತಾಂಡಾದವರು ಮೋಘಾ ಮತಗಟ್ಟೆಯಲ್ಲಿಯೇ ಮತದಾನ ಮಾಡುವಂತಾಗಿದೆ.

ಈ ತಾಂಡಾ ಗುಡ್ಡದ ಮೇಲಿದೆ. ತಾಂಡಾದ ದಕ್ಷಿಣ ದಿಕ್ಕಿನಲ್ಲಿ ಮೋಘಾ ಗ್ರಾಮದಿಂದ 1 ಕಿ.ಮೀ ಅಂತರದಲ್ಲಿ ಸಕ್ರು ನಾಯಕ ತಾಂಡಾವಿದೆ. ಅವರು ಕೂಡ ಮೋಘಾ ಗ್ರಾಮಕ್ಕೆ ತೆರಳಿ ಮತದಾನ ಮಾಡುತ್ತಾ ಬಂದಿದ್ದಾರೆ. ಸಕ್ರು ನಾಯಕ ತಾಂಡಾ ಧಾವಜಿ ತಾಂಡಾ ನಡುವೆ ಸಂಪರ್ಕ ಬೆಸೆಯುವ ರಸ್ತೆ ಇಲ್ಲದ ಕಾರಣ ಮತದಾನಕ್ಕೆ ಇವರು ಹೈರಾಣಾಗುವಂತಾಗಿದೆ.

ಚಿಂಚೋಳಿ ವನ್ಯಜೀವಿ ಧಾಮದ ಹೃದಯಭಾಗದಲ್ಲಿ ಬರುವ ಶೇರಿಭಿಕನಳ್ಳಿ ತಾಂಡಾವಾಸಿಗಳು 4 ಕಿ.ಮೀ ದೂರದ ಧರ್ಮಸಾಗರ ಮತಗಟ್ಟೆಗೆ ಬಂದು ಮತದಾನ ಮಾಡುವಂತಾಗಿದೆ.

ತಾಲ್ಲೂಕಿನ ಚಂದನಕೇರಾ ಗ್ರಾಮ ವ್ಯಾಪ್ತಿಯ ಮಂಡಗೋಳ ತಾಂಡಾದವರು 5 ಕಿ.ಮೀ ದೂರದ ಖೂನಿ ತಾಂಡಾ ಮತಗಟ್ಟೆಗೆ ಬಂದು ಮತದಾನ ಮಾಡುತ್ತ ಬಂದಿದ್ದಾರೆ. ಕಮಲಾಪುರ ತಾಲ್ಲೂಕಿನ ಚೇಂಗಟಾ ಗ್ರಾಮದ ಮತಗಟ್ಟೆಗೆ 5 ಕಿ.ಮೀ ದೂರದ ಮೋತಿರಾಮ ನಾಯಕ ತಾಂಡಾದ ಮತದಾರರು ಬಂದು ಮತ ಚಲಾಯಿಸುವಂತಾಗಿದೆ.

ರಟಕಲ್ ಗ್ರಾಮ ಮತಗಟ್ಟೆಯಲ್ಲಿ 5 ಕಿ.ಮೀ ದೂರದ ರಟಕಲ್ ಸಣ್ಣ ತಾಂಡಾ ಮತದಾರರು ಹಕ್ಕು ಚಲಾಯಿಸುತ್ತಾರೆ. ತಾಲ್ಲೂಕಿನ ಯತೆಬಾರಪುರ, ಜಂಗ್ಲೀಪೀರ ತಾಂಡಾದವರು 3.5 ಕಿ.ಮೀ ದೂರದ ಗೌಡಪಗುಡಿ ತಾಂಡಾಕ್ಕೆ ತೆರಳುತ್ತಾರೆ.

ಚಿಂಚೋಳಿ ವಿಧಾನಸಭಾ ಮತಕ್ಷೇತ್ರದಲ್ಲಿ ಮತಗಟ್ಟೆಗಳು ಹೆಚ್ಚಾಗಿಲ್ಲ. ವಿಧಾನಸಭೆ ಚುನಾವಣೆಯಲ್ಲಿ 242 ಮತಗಟ್ಟೆಗಳಿದ್ದವು ಈಗಲೂ ಅಷ್ಟೆ ಇವೆ ಎನ್ನುತ್ತಾರೆ ಸಹಾಯಕ ಚುನಾವಣಾಧಿಕಾರಿ ಸಂತೋಷ ಇನಾಂದಾರ.

ಪಕ್ಷಗಳಿಂದ ಮತದಾನಕ್ಕೆ ವಾಹನ ವ್ಯವಸ್ಥೆ ಕಣ್ಮುಚ್ಚಿ ಕುಳಿತ ಚುನಾವಣಾ ಆಯೋಗತಾಂಡಾಗಳಲ್ಲಿ ಮತಗಟ್ಟೆಗೆ ಆಗ್ರಹ
ಧಾವಜಿ ನಾಯಕ ತಾಂಡಾದಲ್ಲಿ 218 ಮತದಾರರಿದ್ದಾರೆ ಮತದಾನ ಕೇಂದ್ರ ತೆರೆಯಲು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಗ 20 ಕಿ.ಮೀ ದೂರದ ಮೋಘಾ ಗ್ರಾಮಕ್ಕೆ ತೆರಳಿ ಮತದಾನ ಮಾಡುತ್ತಿದ್ದೇವೆ
-ನೀಲಕಂಠ ಚವ್ಹಾಣ ಮುಖಂಡ ಧಾವಜಿ ತಾಂಡಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT