ರುಮ್ಮನಗೂಡ ಗ್ರಾಮದ ಹೈದರ ಪಟೇಲ್ ಲಾಡಲೆ ಪಟೇಲ್(68) ಪತ್ತೆಪಾಡ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡವರು. ಒಬ್ಬ ಪುತ್ರ ಹಾಗೂ ಪುತ್ರಿ ಇದ್ದು, ಇಬ್ಬರೂ ಮಾನಸಿಕ ಅಸ್ವಸ್ಥರಾಗಿದ್ದಾರೆ. ಮಳೆ ಕೊರತೆಯಿಂದ 8 ಎಕರೆ ಜಮೀನಲ್ಲಿ ಸಾಲ ಮಾಡಿ ಬಿತ್ತನೆಗೈದಿದ್ದ ಬೆಳೆ ನಷ್ಟವಾಯಿತು. ಕರ್ನಾಟಕ ಗ್ರಾಮೀಣ ಬ್ಯಾಂಕ್ ಚಿಂಚೋಳಿ ಶಾಖೆ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೋಡ್ಲಿಯಲ್ಲಿ ಅಂದಾಜು ₹ 2 ಲಕ್ಷ ಸಾಲ ಇದೆ. ಜತೆಗೆ ಖಾಸಗಿ ವ್ಯಕ್ತಿಗಳ ಬಳಿಯೂ ಸಾಲ ಇದೆ. ಅದನ್ನು ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಕುಟುಂಬಸ್ಥರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.