ಆಳಂದ: ತಾಲ್ಲೂಕಿನ ಮುನ್ನೋಳ್ಳಿ ಕೆರೆಯಲ್ಲಿ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಮೀನುಗಾರಿಕೆ ಇಲಾಖೆ ಸಹಯೋಗದಲ್ಲಿ ಮತ್ಸ್ಯಸಂಜೀವಿನಿ ಯೋಜನೆಯಡಿ 14000 ಮೀನು ಮರಿ ಬಿತ್ತನೆ ಕಾರ್ಯವು ಈಚೆಗೆ ಕೈಗೊಳ್ಳಲಾಯಿತು.

ಈ ವೇಳೆ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ ಮಾತನಾಡಿ, ಮೀನು ಸಾಕಾಣಿಕೆ ಗ್ರಾಮೀಣ ಭಾಗದಲ್ಲಿ ಹೊಸ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ. ಕೆರೆಯು ಕುಡಿಯುವ ನೀರಿಗೆ ಮಾತ್ರ ಬಳಕೆಗೆ ಸೀಮಿತವಾಗದೆ ಗ್ರಾಮೀಣ ಜನ, ಜಾನುವಾರುಗಳ ನೀರು, ಕೃಷಿ ಜತೆಯಲ್ಲಿ ಪ್ರಾಕೃತಿಕ ತಾಣವಾಗಿಯೂ ಅಭಿವೃದ್ಧಿ ಪಡೆಸಲು ಸಾಧ್ಯವಿದೆ ಎಂದರು.

ವಿಶೇಷವಾಗಿ ಸಂಜೀವಿನಿ ಯೋಜನೆಯಡಿ ಮಹಿಳೆಯರನ್ನು ಸ್ವಾವಲಂಬನೆಗೊಳಿಸಲು ಹಲವು ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಕಾರ್ಯಕ್ರಮಗಳು ಜಾರಿಯಲ್ಲಿದ್ದು, ಮಹಿಳಾ ಸ್ವಸಹಾಯ ಸಂಘಗಳು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ಗ್ರಾ.ಪಂ ಅಧ್ಯಕ್ಷ ರಾಜಶೇಖರ ಚವ್ಹಾಣ, ವಲಯ ಮೇಲ್ವಿಚಾರಕ ನಾಗರಾಜ ಎಸ್.ಟಿ., ಉದ್ಯಮಶೀಲತಾ ಯೋಜನೆ ವ್ಯವಸ್ಥಾಪಕ ಶರಣಬಸವ ಬಿ.ಎಂ., ಭೀಮರಾಯ, ದೀಪಕ ಕೆ.ಎನ್., ವಿನೋಧ ಸಿಂಧೆ, ವಿಜಯಲಕ್ಷ್ಮಿ, ಶಿಲ್ಪಾ ಉಪಸ್ಥಿತರಿದ್ದರು. ಗ್ರಾಮದ ಗಂಗಮ್ಮನ ಕೆರೆಯಲ್ಲಿ ಮೀನು ಮರಿ ಬಿತ್ತನೆ ಜತೆಯಲ್ಲಿ ಗ್ರಾಮದಲ್ಲಿ ಕೆರೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.