ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಇಎ ಅಕ್ರಮ: ಹಾಸ್ಟೆಲ್ ವಾರ್ಡನ್‌ ಬಂಧನ

Published 24 ಫೆಬ್ರುವರಿ 2024, 15:28 IST
Last Updated 24 ಫೆಬ್ರುವರಿ 2024, 15:28 IST
ಅಕ್ಷರ ಗಾತ್ರ

ಕಲಬುರಗಿ: ಬ್ಲೂಟೂತ್ ಬಳಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನೇಮಕಾತಿ ಪರೀಕ್ಷೆ ಬರೆಯಲು ನೆರವಾಗಿದ್ದ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರದ ಸಮಾಜ ಕಲ್ಯಾಣ ಇಲಾಖೆಯ ವೃತ್ತಿಪರ ವಸತಿ ನಿಲಯದ ವಾರ್ಡನ್ ಬಸವರಾಜ ಯಾಳವಾರ ಎಂಬಾತನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಆರ್‌.ಡಿ.ಪಾಟೀಲ ಆಪ್ತನಾಗಿದ್ದ ಬಸವರಾಜ, ಅಫಜಲಪುರ ತಾಲ್ಲೂಕಿನ ಸಾಗನೂರು ಗ್ರಾಮದ ನಿವಾಸಿ. ಆರ್‌.ಡಿ. ಪಾಟೀಲ ಪರವಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಅಫಜಲಪುರದ ರಾಯಲ್ ಪಬ್ಲಿಕ್ ಶಾಲಾ ಕೇಂದ್ರದ ಮುಖ್ಯಸ್ಥನಾಗಿದ್ದ ಚಂದ್ರಕಾಂತ ಹಾಗೂ ಕಸ್ಟೋಡಿಯನ್ ಆಗಿದ್ದ ಬಸಣ್ಣ (ಬಸವರಾಜ) ಪೂಜಾರಿಗೆ ₹ 40 ಲಕ್ಷ ನೀಡಿದ್ದ ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದು ಸಿಐಡಿ ಪೊಲೀಸ್‌ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಆರ್‌.ಡಿ. ಪಾಟೀಲ ಸೇರಿ 12 ಮಂದಿ ವಿರುದ್ಧ 2023ರ ಡಿಸೆಂಬರ್‌ನಲ್ಲಿ ‘ಕೋಕಾ’ ಪ್ರಕರಣ ದಾಖಲಾಗಿತ್ತು. ಆ ಬಳಿಕ ಬಸವರಾಜ ತಲೆ ಮರೆಸಿಕೊಂಡಿದ್ದ. ತಿಂಗಳ ಹಿಂದೆ ವಾರ್ಡನ್ ಆಗಿ ಸೇರ್ಪಡೆಯಾಗಿದ್ದ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT