ಬುಧವಾರ, ಅಕ್ಟೋಬರ್ 20, 2021
24 °C
ಆಲಂಕಾರಿಕಾ ಎಲ್‌ಇಡಿ ಬಲ್ಬ್‌ ಅಳವಡಿಕೆಗೆ ಚಾಲನೆ ನೀಡಿದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ

₹ 2 ಕೋಟಿ ಚೆಚ್ಚದಲ್ಲಿ ಎಲ್‌ಇಡಿ ಬಲ್ಬ್‌ ಅಳವಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಶಾಸಕ ದತ್ತಾತ್ರೇಯ ಪಾಟೀಲ ರೇವೂರ್

ಕಲಬುರ್ಗಿ: ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ವಿವಿಧ ರಸ್ತೆಗಳಿಗೆ ಆಲಂಕಾರಿಕ ಎಲ್‌ಇಡಿ ದೀಪಗಳನ್ನು ಅಳವಡಿಸುವ ಯೋಜನೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ್ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು.

14ನೇ ಹಣಕಾಸು ಯೋಜನೆಯಡಿಯಲ್ಲಿ ನಗರದ ಜಗತ್ ವೃತ್ತದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರಿಗೆ ₹ 80 ಲಕ್ಷ ವೆಚ್ಚದ ಯೋಜನೆ ಹಾಗೂ ಅನ್ನಪೂರ್ಣ ಕ್ರಾಸ್‌ನಿಂದ ಬಿಲಗುಂದಿ ವೃತ್ತದ (ಖರ್ಗೆ ಪೆಟ್ರೋಲ್ ಬಂಕ್) ವರೆಗಿನ ₹ 1.18 ಕೋಟಿ ವೆಚ್ಚದ ಯೋಜನೆ ಸೇರಿ ಒಟ್ಟು ₹ 2 ಕೋಟಿ ಚೆಚ್ಚದಲ್ಲಿ ರಸ್ತೆಗಳಿಗೆ ಆಲಂಕಾರಿಕ ದೀಪಗಳನ್ನು ಅಳವಡಿಸಲಾಗುವುದು.

‘ಬೇರೆ ನಗರಗಳಂತೆಯೇ ಕಲಬುರ್ಗಿಯಲ್ಲೂ ಆಲಂಕಾರಿಕ ದೀಪಗಳನ್ನು ಅಳವಡಿಸುವ ಮೂಲಕ ನಗರವನ್ನು ಸ್ಮಾರ್ಟ್ ಸಿಟಿ ಮಾಡುವ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು ಶ್ರಮಿಸಬೇಕು. ಮುಂದಿನ ದಿನಗಳಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಗುಣಮಟ್ಟದ ಎಲ್‌ಇಡಿ ದೀಪಗಳನ್ನು ಅಳವಡಿಸುವ ಮೂಲಕ ನಗರವನ್ನು ಬೆಳಕಿನಿಂದ ಕಂಗೊಳಿಸುವಂತೆ ಮಾಡಬೇಕು’ ಶಾಸಕರು ಸಲಹೆ ನೀಡಿದರು.

‘ಈಗಾಗಲೇ 15ನೇ ಹಣಕಾಸು ಯೋಜನೆಯ ಅನುದಾನ ಬಿಡುಗಡೆಗೊಂಡಿದ್ದು, ನಗರದ ವಿವಿಧ ರಸ್ತೆಗಳಲ್ಲಿ ದೀಪ ಅಳವಡಿಸಲು ₹ 60 ಕೋಟಿಯ ಟೆಂಡರ್ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ನಗರ ಸೋಡಿಯಂ ಬಲ್ಬ್‌ಗಳ ಬದಲಿಗೆ ಎಲ್‌ಇಡಿ ಬಲ್ಬ್‌ ಅಳವಡಿಸಲಾಗುವುದು. ಇದರಿಂದ ಜೆಸ್ಕಾಂಗೆ ವಿದ್ಯುತ್ ಹೊರೆಯೂ ಕಡಿಮೆಯಾಗಲಿದೆ’ ಎಂದು ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದರು.

ಪಾಲಿಕೆಯ ನೂತನ ಸದಸ್ಯರಾದ ವಿಶಾಲ್ ದರ್ಗಿ, ವೀರಣ್ಣ ಹೊನ್ನಳಿ, ಮಹಾನಗರ ಪಾಲಿಕೆಯ ಅಧೀಕ್ಷಕ ಎಂಜಿನಿಯರ್‌ ಆರ್.ಆರ್. ಜಾಧವ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು