ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವನೆ ಕೆರಳಿಸಲ್ಲ; ಬದುಕು ಕಟ್ಟಿಕೊಡುತ್ತೇವೆ-ಪ್ರಿಯಾಂಕ್ ಖರ್ಗೆ

ಲೋಕಸಭೆ ಚುನಾವಣೆ; ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ
Published 1 ಏಪ್ರಿಲ್ 2024, 6:12 IST
Last Updated 1 ಏಪ್ರಿಲ್ 2024, 6:12 IST
ಅಕ್ಷರ ಗಾತ್ರ

ಕಮಲಾಪುರ: ‘ಬಿಜೆಪಿಯವರ ಹಾಗೆ ಸುಳ್ಳು, ಮೋಸ, ವಂಚನೆ ಮಾಡುತ್ತಿಲ್ಲ. ಜನರ ಭಾವನೆಗಳ ಕೆರಳಿಸಿ ಯಾಮಾರಿಸುವುದಿಲ್ಲ. ನುಡಿದಂತೆ ನಡೆದು ಗ್ಯಾರಂಟಿ ಯೋಜನೆಗಳನ್ನು ಒದಗಿಸಿ ಬಡವರ ಬದುಕು ಕಟ್ಟಿಕೊಡುತ್ತಿದ್ದೇವೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಪಟ್ಟಣದ ಕೋಹಿನೂರ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಲೋಕಸಭೆ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ರಾಧಾಕೃಷ್ಣ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿ ಸರ್ಕಾರದಲ್ಲಿ ಶ್ರಮಿಕರ ದುಡ್ಡು ಅಂದಿನ ಸಚಿವರು, ಶಾಸಕರ ಜೇಬು ಸೇರುತ್ತಿತ್ತು. ಆದರೆ ನಾವು ಗ್ಯಾರಂಟಿ ಯೋಜನೆಗಳ ಮೂಲಕ ಬಡವರಿಗೆ ತಲುಪಿಸುತ್ತಿದ್ದೇವೆ. ಇದನ್ನು ಬಿಜೆಪಿಯವರು ಬಿಟ್ಟಿ ಯೋಜನೆ ಎಂದು ಹಿಯಾಳಿಸುತ್ತಿದ್ದಾರೆ. ಬಿಜೆಪಿಯವರೂ ಈ ಯೋಜನೆಗಳ ಲಾಭ ಪಡೆದುಕೊಳ್ಳುತ್ತಿದ್ದಾರೆ’ ಎಂದರು.

ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ಮಲ್ಲಿಕಾರ್ಜುನ ಖರ್ಗೆ ಅವರು 371 (ಜೆ) ಅನುಷ್ಠಾನ, ಇಎಸ್‌ಐ ಆಸ್ಪತ್ರೆ, ಕೇಂದ್ರೀಯ ವಿಶ್ವವಿದ್ಯಾಲಯ ಸೇರಿದಂತೆ ಹಲವು ಯೊಜನೆಗಳನ್ನು ಕಲಬುರಗಿಗೆ ತಂದಿದ್ದಾರೆ. ಅವರು ಪ್ರಧಾನಿಯಾಗವ ಸಾಧ್ಯತೆ ಇದೆ. ಹೀಗಾಗಿ, ರಾಧಾಕೃಷ್ಣ ಅವರನ್ನು ಬೆಂಬಲಿಸಬೇಕು’ ಎಂದು ಹೇಳಿದರು.

ಬಾಬುರಾವ ಚಿಂಚನಸೂರ ಮಾತನಾಡಿ, ‘ಉಮೇಶ ಜಾಧವ ಬೆಂಬಲಿಸಿ ಮೋಸ ಹೋದೆ. ಕೋಲಿ ಕಬ್ಬಲಿಗ ಸಮಾಜದವರನ್ನು ಎಸ್‌ಟಿ ಸೇರಿಸುವುದಾಗಿ ನಂಬಿಸಿ ಯಾಮಾರಿಸಿದ್ದಾರೆ. ಖರ್ಗೆ ಪ್ರಧಾನಿ, ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಆಗುವರು’ ಎಂದರು.

ರಾಧಾಕೃಷ್ಣ ದೊಡ್ಡಮನಿ, ಮುಖಂಡರಾದ ಜಗದೇವ ಗುತ್ತೇದಾರ, ವೈಜನಾಥ ತಡಕಲ್, ಮಲ್ಲಿನಾಥ ಪಾಕ, ವಿಜಯಕುಮಾರ ಜಿ.ಆರ್., ರೇವುನಾಯಕ ಬೆಳಮಗಿ, ಚಂದ್ರಶೇಖರ ಪಾಟೀಲ, ಶರಣಪ್ಪ ಮಟ್ಟೂರ, ಜಗನ್ನಾಥ ಗೋಧಿ, ತಿಪ್ಪಣಪ್ಪ ಕಮಕನೂರ, ಶಾಮ ನಾಟೀಕಾರ, ಅಮರನಾಥ ತಡಕಲ್, ಗುರುರಾಜ ಮಾಟೂರ, ಬಸವರಾಜ ಮಠಪತಿ, ಅಮರ ಚಿಕ್ಕೆಗೌಡ, ಗುರುರಾಜ ಪಾಟೀಲ, ರಾಜು ಕಪನೂರ, ಸಂತೋಷ ರಾಂಪೂರೆ, ಪ್ರಶಾಂತ ಮಾನಕಾರ, ಶರಣು ಗೌರೆ, ಸೋಮಶೇಖರ ಗೋನಾಯಕ, ಬಾಬು ಹೊನ್ನಾನಾಯಕ, ಕನ್ನಿರಾಮ ರಾಠೋಡ, ಗುರುರಾಜ ಬಮ್ಮಣ, ಗುಂಡಪ್ಪ ಮೋಳಕೇರಿಮ ಹಾಜರಿದ್ದರು. 

ಕ್ಷೇತ್ರದಲ್ಲಿ ಸುಮಾರು 2 ಲಕ್ಷಕ್ಕಿಂತ ಹೆಚ್ಚು ಎಡಗೈ ಸಮುದಾಯದವರಿದ್ದೇವೆ. ನಮ್ಮ ಜನಾಂಗದವರಿಗೆ ಸರ್ಕಾರದಲ್ಲಿ ಉನ್ನತ ಸ್ಥಾನ ಒದಗಿಸಬೇಕು
ವಿಜಯಕುಮಾರ ಜಿ.ಆರ್‌. ಮುಖಂಡ
ವಿಜಯಕುಮಾರ ಅವರು ಸೂಕ್ಷ್ಮವಾಗಿ ಹೇಳಿದ್ದು ನನ್ನ ಗಮನಕ್ಕೆ ಬಂದಿದೆ. ಕೆಲವೇ ದಿನಗಳಲ್ಲಿ ಎಡಗೈ ಸಮುದಾಯವರಿಗೆ ಸೂಕ್ತ ಸ್ಥಾನಮಾನ ಒದಗಿಸಲಾಗುವುದು
ಪ್ರಿಯಾಂಕ್ ಖರ್ಗೆ ಸಚಿವ
‘ಚಿಂಚೋಳಿ ಸಂಸದ ಜಾಧವ್’
‘ಉಮೇಶ ಜಾಧವ ಅವರು ಚಿಂಚೋಳಿ ಬಿಟ್ಟು ಬೇರೆಲ್ಲೂ ಕಾಣುವುದಿಲ್ಲ. ನಾನಂತೂ ಅವರಿಗೆ ಚಿಂಚೋಳಿಯ ಸಂಸದರಂತಲೇ ಕರೆಯುತ್ತೇನೆ’ ಎಂದು ಪ್ರಿಯಾಂಕ ಖರ್ಗೆ ಕಿಚಾಯಿಸಿದರು. ಜಿಲ್ಲೆಯ ಜನರ ಸಮಸ್ಯೆ ಕೇಳುವುದಿಲ್ಲ. ಮೋದಿಯವರೆ ಇವರನ್ನು ಗುರುತು ಹಿಡಿಯುವುದಿಲ್ಲ. ಹಿಂದೆ ಮಲ್ಲಿಕಾರ್ಜುನ ಖರ್ಗೆಯವರು ತಂದ ಯೋಜನೆಗಳನ್ನು ಉಳಿಸಿಕೊಳ್ಳಲು ಸಹ ಆಗಲಿಲ್ಲ. ಸಂಸತ್ತಿನಲ್ಲಿ ನಮ್ಮ ಹಕ್ಕು ಕೇಳುವುದಿಲ್ಲ. ಇವರನ್ನು ಆಯ್ಕೆ ಮಾಡಿ ನಾವು 5 ವರ್ಷ ಹಿಂದೆ ಬಿದ್ದಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT