ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಶಾಸಕ ಬಸವರಾಜ ಮತ್ತಿಮಡು ಕಾರು ಪಲ್ಟಿ; ಗಾಯ

Published 14 ಜನವರಿ 2024, 6:28 IST
Last Updated 14 ಜನವರಿ 2024, 6:28 IST
ಅಕ್ಷರ ಗಾತ್ರ

ಕಲಬುರಗಿ: ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಸಂಚರಿಸುತ್ತಿದ್ದ ಕಾರು ತಾಲ್ಲೂಕಿನ ಪಾಳಾ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು, ಶಾಸಕರು ಹಾಗೂ ಕಾರಿನಲ್ಲಿದ್ದ ಮುಖಂಡರಿಗೆ ಗಾಯಗಳಾಗಿವೆ.

ಬೆಳಿಗ್ಗೆ ಕಲಬುರಗಿಯಲ್ಲಿಯ ಐವಾನ್ ಇ ಶಾಹಿ ಅತಿಥಿಗೃಹದಲ್ಲಿದ್ದ ಶಾಸಕರು ನಂತರ ಪಾಳಾ ಗ್ರಾಮಕ್ಕೆ ತೆರಳಿದ್ದರು. ಅಲ್ಲಿಂದ ಶಹಾಬಾದ್ ನಗರಕ್ಕೆ ತೆರಳುತ್ತಿದ್ದ ವೇಳೆ‌ ಕಾರು ಪಲ್ಟಿಯಾಯಿತು.

ಇದರಿಂದಾಗಿ ಶಾಸಕರ ಎದೆ ಭಾಗಕ್ಕೆ ಒಳಪೆಟ್ಟಾಗಿದೆ. ಅವರನ್ನು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಮಾಹಿತಿ ಪಡೆದ ಅವರ ಪತ್ನಿ ಜಯಶ್ರೀ ಮತ್ತಿಮಡು ಹಾಗೂ ಪುತ್ರ ಆಕಾಶ್ ಆಸ್ಪತ್ರೆಗೆ ‌ಧಾವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT