ತಾ.ಪಂ. ಮಾಜಿ ಸದಸ್ಯನ ಪುತ್ರನ ಕೊಲೆ ಪ್ರಕರಣ: 10 ಜನ ಆರೋಪಿಗಳ ಬಂಧನ

7

ತಾ.ಪಂ. ಮಾಜಿ ಸದಸ್ಯನ ಪುತ್ರನ ಕೊಲೆ ಪ್ರಕರಣ: 10 ಜನ ಆರೋಪಿಗಳ ಬಂಧನ

Published:
Updated:
Deccan Herald

ಕಲಬುರ್ಗಿ: ಆಳಂದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಣ ಬೀಳಗಿ ಅವರ ಪುತ್ರನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನ ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಭೂಸನೂರ ಗ್ರಾಮದ ನಾಗರಾಜ ಅಪ್ಪಾರಾವ ಪಾಟೀಲ, ಸಚಿನ್ ಅಣ್ಣಾರಾವ ಪಾಟೀಲ, ಅಸ್ಲಾಂ ಭಾಷಾಸಾಬ್ ಪಾಗದ, ಹಸನ್ ಅಲಿಯಾಸ್ ಚೋಟಾ ಹಸನ್, ದಾವೂದ್ ದಸ್ತಗಿರ್ ಪಾಗದ, ಸಚಿನ್ ಶಶಿಕಾಂತ ಪೊಲೀಸ್‌ಪಾಟೀಲ, ಶಂಕರರಾವ ಸಿದ್ದನಗೌಡ ಪಾಟೀಲ, ಅಶೋಕ ಶಂಕರರಾವ ಪಾಟೀಲ, ಗಿರೀಶ ಗುಂಡೇರಾವ ಗೊಬ್ಬೂರ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಬಂಧಿತರು.

ಬಂಧಿತರಿಂದ ಒಂದು ಬುಲೆರೊ ವಾಹನ, ಬೈಕ್, ಮಾರಕಾಸ್ತ್ರಗಳು ಮತ್ತು 5ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್, ‘ಸೆ.2ರಂದು ರಾತ್ರಿ 8.30 ಗಂಟೆ ಸುಮಾರಿಗೆ ಮೃತ ರಾಹುಲ ಲಕ್ಷ್ಮಣ ಬೀಳಗಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಭೂಸನೂರನಿಂದ ಆಳಂದಕ್ಕೆ ಬರುತ್ತಿದ್ದ. ಈ ವೇಳೆ ಬುಲೆರೊ ವಾಹನದಲ್ಲಿ ಬೆನ್ನತ್ತಿದ ಆರೋಪಿಗಳು ಬೈಕ್‌ಗೆ ಡಿಕ್ಕಿ ಹೊಡೆಸಿ ಆತನನ್ನು ಕೆಳಗೆ ಬೀಳಿಸಿದ್ದಾರೆ. ಆ ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ’ ಎಂದರು.

‘ಮೃತ ರಾಹುಲ ತಂದೆ ಲಕ್ಷ್ಮಣ ಹಾಗೂ ಬಾಪುಗೌಡ ಪಾಟೀಲ ಅವರ ಕುಟುಂಬದ ಮಧ್ಯೆ ಹಲವಾರು ವರ್ಷಗಳಿಂದ ರಾಜಕೀಯ ಮತ್ತು ವೈಯಕ್ತಿಯ ವೈಷಮ್ಯವಿತ್ತು. ಈ ಕಾರಣದಿಂದಲೇ ಬಾಪುಗೌಡ ಹಾಗೂ ಅವರ ಸಹಚರರು ಸೇರಿ ತಮ್ಮ ಮಗನ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ 14 ಜನರ ವಿರುದ್ಧ ಲಕ್ಷ್ಮಣ ದೂರು ದಾಖಲಿಸಿದ್ದರು’ ಎಂದು ತಿಳಿಸಿದರು.

‘ಬಂಧಿತರ ಪೈಕಿ ಪ್ರಮುಖ ಆರೋಪಿಗಳು ರಾಹುಲ ಕೊಲೆಗೆ ₹5 ಲಕ್ಷ ಸುಫಾರಿ ಕೊಟ್ಟಿದ್ದರು. ಅಲ್ಲದೆ, ಕೊಲೆ ಮಾಡಿದ ಬಳಿಕ ಇನ್ನಷ್ಟು ಹಣ ಕೊಡುವ ಆಮಿಷವೊಡ್ಡಿದ್ದರು. ತಮ್ಮ ಜತೆ ಸಂಪರ್ಕ ಮಾಡಲು ಮೊಬೈಲ್ ಕೊಡಿಸಿದ್ದರು’ ಎಂದು ಹೇಳಿದರು.

ಡಿವೈಎಸ್‌ಪಿ ಎಸ್.ಎಸ್.ಹುಲ್ಲೂರ, ಇನ್‌ಸ್ಪೆಕ್ಟರ್ ಎಚ್.ಬಿ.ಸಣ್ಣಮನಿ, ಪಿಎಸ್‌ಐ ಸುರೇಶ ಬಾಬು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !