‘ನಿರಂತರ ಪ್ರಯತ್ನ ವ್ಯಕ್ತಿತ್ವ ವಿಕಸನಕ್ಕೆ ಪೂರಕ’

7

‘ನಿರಂತರ ಪ್ರಯತ್ನ ವ್ಯಕ್ತಿತ್ವ ವಿಕಸನಕ್ಕೆ ಪೂರಕ’

Published:
Updated:
Deccan Herald

ಕಲಬುರ್ಗಿ: ಮಕ್ಕಳು ತಮ್ಮ ಜೀವನದಲ್ಲಿ ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿ, ಉನ್ನತವಾದ ಸಾಧನೆಯನ್ನು ಮಾಡಬೇಕಾದರೆ ಶಿಸ್ತುಬದ್ಧವಾದ ಜೀವನದ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಶ್ರೀಶೈಲ ಸಾರಂಗ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ನಗರದ ಆಳಂದ ರಸ್ತೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಜಗಜ್ಯೋತಿ ಬಸವೇಶ್ವರ ಸಮಾಜ ಸೇವಾ ಬಳಗದಿಂದ ಶನಿವಾರ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೇರು ವ್ಯಕ್ತಿತ್ವ ಹೊಂದಬೇಕಾದರೆ ಅಹಂಕಾರ, ಕೋಪ, ಅಸೂಯೆಯಂತಹ ಗುಣಗಳನ್ನು ತ್ಯಜಿಸಬೇಕು. ಜಾತಿ, ವರ್ಗಗಳಿಗೆ ಆದ್ಯತೆ ನೀಡದೆ, ಮಾನವೀಯತೆಗೆ ಪ್ರಾಧಾನ್ಯತೆ ನೀಡಬೇಕು. ಎಂತಹ ಸಂದರ್ಭಗಳಲ್ಲಿಯೂ ಪ್ರಜ್ಞಾ ಪೂರ್ವಕವಾಗಿಯೇ ವರ್ತಿಸಬೇಕು. ಸುಖ ಹಾಗೂ ದುಖಃಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಹೊಂದಿರಬೇಕು. ಪರಸ್ಪರ ಪ್ರೀತಿ, ಸ್ನೇಹ, ಸಹಬಾಳ್ವೆಯಿಂದ ಜೀವನ ಸಾಗಿಸಬೇಕು ಎಂದು ತಿಳಿಸಿದರು.

ನಿವೃತ್ತ ಪ್ರಾಚಾರ್ಯ ವೈಜನಾಥ ಕೋಳಾರ ಮಾತನಾಡಿ, ಸದಾ ಸಕಾರಾತ್ಮಕವಾದ ಚಿಂತನೆ, ಹೊಸ ಆಲೋಚನೆ, ಸೃಜನಶೀಲತೆ, ವ್ಯಾಯಾಮ, ಯೋಗ, ಧ್ಯಾನ, ಪ್ರಾರ್ಥನೆಯಲ್ಲಿ ತೊಡಗಿಸಿಕೊಳ್ಳಬೇಕು. ನಿಗದಿತ ಗುರಿಯೊಂದಿಗೆ ಕಾರ್ಯಕೈಗೊಂಡರೆ ಖಂಡಿತ ಯಶಸ್ಸು ದೊರಕುತ್ತದೆ ಎಂದು ಹೇಳಿದರು.

ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ವಕೀಲ ಹಣಮಂತರಾಯ ಅಟ್ಟೂರ ಹಾಗೂ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಕಟ್ಟಿಮನಿ ಮಾತನಾಡಿದರು.

ಬಳಗದ ಗೌರವ ಅಧ್ಯಕ್ಷ ಶಾಂತಪ್ಪ ನರೋಣಾ, ಉಪಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ, ಕಾರ್ಯದರ್ಶಿ ರಾಜಶೇಖರ ಮರಡಿ, ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ ಟಿಳ್ಳೆ ಇದ್ದರು.

ಸಹ ಶಿಕ್ಷಕ ಚಂದ್ರಕಾಂತ ತಳವಾರ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ರಟಕಲ್ ನಿರೂಪಿಸಿ, ವಂದಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !