ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಕಾನ್‌ಸ್ಟೆಬಲ್‌ಗೆ ಕಪ್ಪು ಶಿಲೀಂಧ್ರ ತಗುಲಿದ ಶಂಕೆ

Last Updated 15 ಮೇ 2021, 3:30 IST
ಅಕ್ಷರ ಗಾತ್ರ

ಕಲಬುರ್ಗಿ: ಕೋವಿಡ್‌ನಿಂದ ಗುಣಮುಖರಾದ ನಗರದ ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರಿಗೆ ಕೆಲವೇ ದಿನಗಳಲ್ಲಿ ದೃಷ್ಟಿದೋಷ ಹಾಗೂ ಪಾರ್ಶ್ವವಾಯು ಉಂಟಾಗಿದೆ. ಇದು ಕಪ್ಪುಶಿಲೀಂಧ್ರ (ಬ್ಲ್ಯಾಕ್‌ ಫಂಗಸ್‌)ದ ಸೋಂಕು ಎಂದು ಚಿಕಿತ್ಸೆ ನೀಡಿದ ವೈದ್ಯರು ಸಂದೇಹ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಶಹಾಬಾದ್‌ ರಸ್ತೆಯ ರಾಜಾಪುರ ಬಡವಾಣೆ ನಿವಾಸಿ 45 ವರ್ಷದ ಪೊಲೀಸ್‌ ಕಾನ್‌ಸ್ಟೆಬಲ್‌ ಕಳೆದ ತಿಂಗಳು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಚಿಕಿತ್ಸೆ ಪಡೆದ ನಂತರ ಅವರು ಸಂಪೂರ್ಣ ಗುಣಮುಖವಾಗಿದ್ದರು.

‘ಮನೆಗೆ ಮರಳಿದ ಒಂದು ವಾರದ ನಂತರ ಅವರ ಎಡಗಣ್ಣು ಕಾಣಿಸದಂತಾಗಿದೆ. ನೇತ್ರ ತಜ್ಞರ ಬಳಿ ಚಿಕಿತ್ಸೆ ಪಡೆದ ನಂತರವೂ ಗುಣವಾಗಿಲ್ಲ. ಈಗ ಬಲಗಣ್ಣು ಕೂಡ ಮಂಜಾಗಿದ್ದು, ವಾರದ ಹಿಂದೆ ಪಾರ್ಶ್ವವಾಯು ಕೂಡ ಆಗಿದೆ.ನಾಲ್ಕು ದಿನಗಳ ಹಿಂದೆ ನಗರದ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು, ಇದು ಬ್ಲ್ಯಾಕ್‌ ಫಂಗಸ್‌ ಲಕ್ಷಣ ಎಂದು ವೈದ್ಯರು ಶಂಕಿಸಿದ್ದಾರೆ’ ಎಂಬುದು ಮೂಲಗಳ ವಿವರಣೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ, ‘ಕೊರೊನಾದಿಂದ ಗುಣಮುಖವಾದ ಮೇಲೆ ಯಾವುದೇ ವ್ಯಕ್ತಿಗೆ ಬ್ಯ್ಲಾಕ್‌ ಫಂಗಸ್‌ ಆಗಿದ್ದು ಇದೂವರೆಗೆ ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ. ಅಲ್ಲದೇ, ಕಾನ್‌ಸ್ಟೆಬಲ್‌ಗೆ ಚಿಕಿತ್ಸೆ ನೀಡಿದ ಆಸ್ಪತ್ರೆ ವೈದ್ಯರಾಗಲಿ ಅವರ ಕುಟುಂಬದವರಾಗಲಿ ನಮಗೆ ಮಾಹಿತಿ ನೀಡಿಲ್ಲ. ಶುಕ್ರವಾರ ಅವರ ಮಾದರಿ ತರಿಸಿಕೊಳ್ಳಲಾಗಿದೆ. ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಬಂದ ನಂತರ ಖಚಿತ ಮಾಹಿತಿ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT