ಕಲಬುರ್ಗಿ: ಜೆಸ್ಕಾಂ ವ್ಯಾಪ್ತಿಯಲ್ಲಿ ಎಚ್.ಟಿ./ ಎಲ್.ಟಿ. ಮಾರ್ಗ ಸ್ಥಳಾಂತರ ಕಾರ್ಯ ಹಾಗೂ ದುಬೈ ಕಾಲೊನಿ ಫೀಡರ್ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಂಡಿರುವ ಪ್ರಯುಕ್ತ ಜ. 17ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ಯ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಐ.ಟಿ.ಪಾರ್ಕ್ ಫೀಡರ್: ಸಂತೋಷ ಕಾಲೊನಿ, ವರ್ಗೀಸ್ ಅಪಾರ್ಟ್ಮೆಂಟ್, ಮಾಣಿಕ ಪ್ರಭು ಕಾಲೊನಿ, ಐ.ಟಿ.ಪಾರ್ಕ್, ನಂದ ಗೋಕುಲ, ಜಯತೀರ್ಥ ಕಲ್ಯಾಣ ಮಂಟಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ದುಬೈ ಕಾಲೊನಿ ಫೀಡರ್: ಎಂ.ಜಿ.ಟಿ.ಟಿ, ಆಶ್ರಯ ಕಾಲೊನಿ, ದುಬೈ ಕಾಲೊನಿ, ಶೇಖ ರೋಜಾ, ಜಿಡಿಎ, ಕಸ್ತೂರಿ ನಗರ, ಸ್ವಾರ್ಗೆಟ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಜೆಸ್ಕಾಂ ಕಾರ್ಯ ಮತ್ತಪ ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.