ಶುಕ್ರವಾರ, ಫೆಬ್ರವರಿ 21, 2020
29 °C
ಅಂಗನವಾಡಿ ಕೇಂದ್ರದ ವ್ಯವಸ್ಥೆ ಪರಿಶೀಲನೆ

ಗುಣಮಟ್ಟದ ಆಹಾರ ಪೂರೈಕೆ ಮಾಡಿ: ಶಾಸಕ ಎಂ.ವೈ.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ಅಂಗನವಾಡಿಗಳಿಗೆ ಕರ್ನಾಟಕ ಅಭಿವೃದ್ಧಿ 20 ಅಂಶಗಳ ಕಾರ್ಯಕ್ರಮ ಅಡಿಯಲ್ಲಿ ಪೂರಕ ಪೌಷ್ಟಿಕ ಆಹಾರವನ್ನು ಪೂರೈಕೆ ಮಾಡುತ್ತಿದೆ. ಆದರೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿಲ್ಲ. ಅಕ್ಕಿ ಮತ್ತು ಬೆಳೆಗಳು ಪೌಷ್ಟಿಕಾಂಶ ಕೂಡಿದ್ದಲ್ಲ ಶಾಸಕ ಎಂ.ವೈ.ಪಾಟೀಲ ಎಂದು ಅವರು ತಿಳಿಸಿದರು.

ಪಟ್ಟಣದ ವಾರ್ಡ್ ನಂ.11 ಅಂಗನವಾಡಿ ಕೇಂದ್ರಕ್ಕೆ ಈಚೆಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿ ಅಲ್ಲಿಯ ಅಂಗನವಾಡಿಕಾರ್ಯಕರ್ತೆಯರಿಗೆ ಮತ್ತು ವಾರ್ಡಿನ ಪುರಸಭಾ ಸದಸ್ಯರೊಂದಿಗೆ ಚರ್ಚಿಸಿ ಮಾತನಾಡಿದರು.

ಅಂಗನವಾಡಿಗಳಲ್ಲಿ ಸಣ್ಣ ಮಕ್ಕಳು ವ್ಯಾಸಂಗ ಮಾಡುತ್ತಾರೆ ಅವರಿಗೆ ಬೆಳವಣಿಗೆ ಅವಧಿಯಲ್ಲಿ ಪೌಷ್ಟಿಕ ಆಹಾರ ಪೂರೈಕೆ ಆಗಬೇಕು. ಇದರಿಂದ ಅವರು ದೈಹಿಕವಾಗಿ ಸದೃಢರಾಗುತ್ತಾರೆ ಎಂದು ತಿಳಿಸಿದರು.

ಶಿಶು ಅಭಿವೃದ್ಧಿ ಇಲಾಖೆ ತಾಲ್ಲೂಕಿನಲ್ಲಿ 1ರಿಂದ 6 ವರ್ಷದ ಒಟ್ಟು 2430 ಮಕ್ಕಳು, 1 ರಿಂದ 3 ವರ್ಷದೊಳಗಿನ 8321 ಮಕ್ಕಳು, 3ರಿಂದ 6 ವರ್ಷದೊಳಗಿನ 8339 ಮಕ್ಕಳು ಮತ್ತು 2112 ಗರ್ಭಿಣಿಯರು ಮತ್ತು 1982 ಬಾಣಂತಿಯರು ಇದ್ದು, ಇವರೆಲ್ಲರಿಗೂ ಪೌಷ್ಟಿಕ ಆಹಾರ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.

ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಅಂಗನವಾಡಿಗಳಿಗೆ ಭೇಟಿ ನೀಡಿ ಪೌಷ್ಟಿಕ ಆಹಾರ ವಿತರಣೆ ಮಾಡುವ ಬಗ್ಗೆ ಪರಿಶೀಲನೆ ಮಾಡಬೇಕು. ಅಲ್ಲದೇ ತಾಲ್ಲೂಕಿನಲ್ಲಿ 260 ಅಂಗನವಾಡಿ ಕೇಂದ್ರಗಳಿದ್ದು, ಅದರಲ್ಲಿ 30 ಕೇಂದ್ರಗಳು ಖಾಸಗಿ ಕಟ್ಟಡದಲ್ಲಿ ಬಾಡಿಗೆ ನೀಡಿ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅವುಗಳಿಗೆ ಸ್ವಂತ ಕಟ್ಟಡ ಮಂಜೂರು ಮಾಡಲಾಗುವುದು. ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು

ಅಂಗನವಾಡಿ ಕಾರ್ಯಕರ್ತರಾದ ರತ್ನಾ ಕುಲಕರ್ಣಿ ಅವರು ಮಾತನಾಡಿ, ಕಾರ್ಯಕರ್ತೆಯರಿಗೆ ಮನೆಗಳ ನೀಡಬೇಕೆಂದು ಶಾಸಕರಿಗೆ ಕೇಳಿಕೊಂಡರು. ಮಾಜಿ ಪುರಸಭೆ ಸದಸ್ಯ ರಾಜಶೇಖರ ಪಾಟೀಲ ಅವರು ಅಂಗನವಾಡಿ ಕೇಂದ್ರ ಹಳೆಯದಾಗಿದೆ. ದುರಸ್ತಿ ಮಾಡಬೇಕೆಂದು ಶಾಸಕರಿಗೆ ಕೇಳಿಕೊಂಡರು.

ಮುಖಂಡರಾದ ಪ್ರಕಾಶ್ ಜಮಾದಾರ್, ಚಂದ್ರಶೇಖರ್ ಕರಜಿಗಿ ಅರವಿಂದ್ ಸುತಾರ್, ತಾಲ್ಲೂಕು ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ  ಶರಣು ಕುಂಬಾರ, ಅಂಬರೀಷ್ ಬುರಲಿ, ಪಹ್ಲಾದ್ ಕುಲಕರ್ಣಿ ಮಹಿಳಾ ಜಾಗೃತಿ ಮಂಡಳಿ ಅಧ್ಯಕ್ಷೆ ವನಲಾಬಾಯಿ, ಕಾರ್ಯದರ್ಶಿ ನಂದಾ ಕುಲಕರ್ಣಿ, ವಿದ್ಯಾದೇವಿ ಕುಲಕರ್ಣಿ ಮತ್ತು ಅಂಗನವಾಡಿ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು