ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಿರುಕುಳಕ್ಕೆ ಬೇಸತ್ತು ಎಂಜಿನಿಯರ್ ಆತ್ಮಹತ್ಯೆ: 14 ಗಂಟೆಯಾದರೂ ತೆರವಾಗದ ಶವ!

Published 7 ಡಿಸೆಂಬರ್ 2023, 11:39 IST
Last Updated 7 ಡಿಸೆಂಬರ್ 2023, 11:39 IST
ಅಕ್ಷರ ಗಾತ್ರ

ವಾಡಿ: ಎಸಿಸಿ ಆಡಳಿತ ಮಂಡಳಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಎಂಜಿನಿಯರ್ ರಮೇಶ ಪವಾರ ಶವ ಮಾತುಕತೆ ನಡೆಯದ ಕಾರಣ ಶವ 14 ಗಂಟೆಗಳಿಂದ ಸಾರ್ವಜನಿಕವಾಗಿ ನೇಣು ಬಿಗಿದ ಸ್ಥಿತಿಯಲ್ಲಿಯೇ ನೇತಾಡುತ್ತಿದೆ.

ಗುರುವಾರ ಬೆಳಗಿನ ಜಾವ 3 ಗಂಟೆಗೆ ವಿಡಿಯೊ ಚಿತ್ರೀಕರಿಸಿ ಹಾಗೂ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ರಮೇಶ ಅವರ ಸಾವಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಿ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಿದ ಬಳಿಕ ಶವ ತೆಗೆದುಕೊಂಡು ಪ್ರತಿಭಟನೆ ನಡೆಸುವ ಬದಲು ಸಾರ್ವಜನಿಕವಾಗಿ ನೇಣು ಬಿಗಿದ ಸ್ಥಿತಿಯಲ್ಲಿನ ಶವ ವಿಲೇವಾರಿ ಮಾಡದೇ ನಿರ್ಲಕ್ಷ ಮಾಡಲಾಗುತ್ತಿದೆ ಎನ್ನುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ನೇಣು ಬಿಗಿದ ಸ್ಥಿತಿಯಲ್ಲಿರುವ ಶವವನ್ನು ಸರಪಳಿಯಿಂದ ಬಿಚ್ಚಿ ಪ್ರತ್ಯೇಕಿಸದೇ ಅವಮಾನ ಮಾಡಲಾಗುತ್ತಿದೆ. ಶವಕ್ಕೆ ಕನಿಷ್ಠ ಗೌರವ ನೀಡದೆ ಈ ರೀತಿ ಅವಮಾನ ಮಾಡುವುದು ಅತ್ಯಂತ ಬೇಜವಾಬ್ದಾರಿ ಪರಮಾವಧಿಯಾಗಿದ್ದು ಪೊಲೀಸ್ ಇಲಾಖೆ ನಿರ್ಲಕ್ಷ ವಹಿಸಿದೆ ಎಂದು ದಲಿತ ಸೇನಾ ಸಂಘಟನೆ ಜಿಲ್ಲಾ ಅಧ್ಯಕ್ಷ ಶ್ರಾವಣಕುಮಾರ ಮೊಸಲಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT