ಕಲಬುರ್ಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಇಲಿಯಾಸ ಸೇಠ್ ಬಾಗವಾನ ಅವರ ಮನೆ ಹಾಗೂ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರವೂ ಪರಿಶೀಲನೆ ನಡೆಸಿದರು.
‘25 ಜನ ಅಧಿಕಾರಿಗಳ ತಂಡ ಇಲಿಯಾಸ ಅವರಿಗೆ ಸೇರಿದ ಶಾಲೆ–ಕಾಲೇಜು, ಪೆಟ್ರೋಲ್ ಬಂಕ್, ಕಚೇರಿ, ಶೀತಲೀಕರಣ ಘಟಕಗಳಲ್ಲಿ ಪರಿಶೀಲನೆ ನಡೆಸಿದರು’ ಎಂದು ಮೂಲಗಳು ತಿಳಿಸಿವೆ.
ಈ ಅಧಿಕಾರಿಗಳು ಬುಧವಾರ ಬೆಳಿಗ್ಗೆಯಿಂದ ತಡ ರಾತ್ರಿಯ ವರೆಗೂ ಪರಿಶೀಲನೆ ನಡೆಸಿದ್ದರು. ದೊರೆತ ಆಸ್ತಿ ಪಾಸ್ತಿಯ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು.