ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿಶಿಣಕುಪ್ಪೆ ಮಂಜುನಾಥಸ್ವಾಮಿಗೆ 1108 ಎಳನೀರು ಅಭಿಷೇಕ ನಾಳೆ

Published 7 ಮಾರ್ಚ್ 2024, 15:20 IST
Last Updated 7 ಮಾರ್ಚ್ 2024, 15:20 IST
ಅಕ್ಷರ ಗಾತ್ರ

ಸೋಮವಾರಪೇಟೆ: ತೊರೆನೂರು ಗ್ರಾಮ ಪಂಚಾಯಿತಿ ಅರಿಶಿಣಕುಪ್ಪೆಯ ಮಂಜುನಾಥಸ್ವಾಮಿ ಕ್ಷೇತ್ರದ ನವನಾಗನಾಥ ದೇವಾಲಯದಲ್ಲಿ ಜೀವಂತ ನಾಗಗಳು ವಾಸಿಸುತ್ತಿರುವ ಹಿಂದೆ ಪಂಚಮಿಯಂದು ನಾಗದೇವರಿಗೆ ಪೂಜೆ ಪಡೆಯುವುದು ಇಲ್ಲಿನ ವಿಶೇಷ.

ಇಲ್ಲಿ ಪಂಚಮಿಯಂದು ಶ್ರದ್ಧಾ ಭಕ್ತಿಯಿಂದ ಪೂಜೆಗಳು ನಡೆದುಕೊಂಡು ಬರುತ್ತಿದೆ. ಶ್ರಾವಣದ ಪ್ರಥಮ ಹಬ್ಬವಾದ ನಾಗರಪಂಚಮಿಯಂದು ಪೂಜಾ ಕಾರ್ಯಗಳಿಗೆ ಕ್ಷೇತ್ರದ ಗುರುಗಳಾದ ರಾಜೇಶ್ ನಾಥ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಜಗದೀಶ್ ಉಡುಪ ಅವರ ಪೌರೋಹಿತ್ಯದಲ್ಲಿ ಪೂಜೆಗಳು ನಡೆಯುತ್ತಿವೆ.

ಮಹಾ ಶಿವರಾತ್ರಿ ಹಬ್ಬ, ನಾಗರಪಂಚಮಿಯನ್ನು ಇಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದೆ. ದೇವಾಲಯದಲ್ಲಿ ನಾಗ ಪ್ರತಿಷ್ಠಾಪನೆಗೊಂಡಿದ್ದು, ನೆಲ ಮಾಳಿಗೆಯ ಮೇಲೆ ನಾಗನ ಕಲ್ಲನ್ನು ಪ್ರತಿಷ್ಠಾಪಿಸಿ ಇಲ್ಲಿ ಪೂಜಿಸುತ್ತಿರುವುದು ಕ್ಷೇತ್ರದ ವಿಶೇಷಗಳಲ್ಲೊಂದಾಗಿದ್ದು, ಜೀವಂತ ಹಾವುಗಳು ವಾಸಿಸಲು ಅಗತ್ಯವಿರುವ ನೆಲಮಾಳಿಗೆಯನ್ನು ಕಾಣಬಹುದಾಗಿದೆ.

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಇಲ್ಲಿ ಜಾತ್ರೋತ್ಸವ ನಡೆಯಲಿದೆ. 1108 ಎಳನೀರು ಅಭಿಷೇಕ, ಮಹಾಗಣಪತಿ ಹೋಮ, ಅಷ್ಟಯಾಮ ಪೂಜೆ, ರುದ್ರಹೋಮ, ತೀರ್ಥಸ್ನಾನ ಅನ್ನ ಸಂತರ್ಪಣೆ ನಡೆಯಲಿದೆ. ಮಾರ್ಚ್ 8ರ ಸೂರ್ಯೋದಯದಿಂದ ಮಾರ್ಚ್ 9ರ ಬೆಳಗಿನವರೆಗೆ ಭಜನಾ ಕಾರ್ಯಕ್ರಮ ನಡೆಯುವುದು.

ನಂತರ 11 ಗಂಟೆಯಿಂದ ಮಂಜುನಾಥಸ್ವಾಮಿ ಮತ್ತು ಪರಿವಾರ ದೇವರುಗಳಿಗೆ ಮಹಾ ನೈವೇದ್ಯ ಮತ್ತು ಮಹಾಪೂಜೆ ನಡೆಯಲಿದೆ. ಈ ಎಲ್ಲ ಪೂಜಾ ಕಾರ್ಯದಲ್ಲಿ ಸಾವಿರಾರು ಭಕ್ತರು ಆಗಮಿಸಿ ಇಡೀ ರಾತ್ರಿ ಭಜನೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ ಮಾರನೇ ದಿನದ ಪೂಜೆಯಲ್ಲಿಯೂ ಪಾಲ್ಗೊಳ್ಳುವುದು ವಿಶೇಷವಾಗಿದೆ.

ಸೋಮವಾರಪೇಟೆ ಸಮೀಪದ ಅರಿಶಿಣಕುಪ್ಪೆಯ ಮಂಜುನಾಥಸ್ವಾಮಿ ಕ್ಷೇತ್ರದ ನವನಾಗನಾಥ ದೇವಾಲಯದಲ್ಲಿ ನಾಗಬನ
ಸೋಮವಾರಪೇಟೆ ಸಮೀಪದ ಅರಿಶಿಣಕುಪ್ಪೆಯ ಮಂಜುನಾಥಸ್ವಾಮಿ ಕ್ಷೇತ್ರದ ನವನಾಗನಾಥ ದೇವಾಲಯದಲ್ಲಿ ನಾಗಬನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT