ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ಹಾಕಿ: ಐನಂಡ, ಮೇಕೆರಿರಕ್ಕೆ ಜಯ

Published 9 ಏಪ್ರಿಲ್ 2024, 8:10 IST
Last Updated 9 ಏಪ್ರಿಲ್ 2024, 8:10 IST
ಅಕ್ಷರ ಗಾತ್ರ

ನಾಪೋಕ್ಲು (ಕೊಡಗು ಜಿಲ್ಲೆ): ಐನಂಡ, ಮೇಕೆರಿರ ತಂಡಗಳು ಕುಂಡ್ಯೋಳಂಡ ಕಪ್‌ಗಾಗಿ ನಡೆಯುತ್ತಿರುವ ಹಾಕಿ ಟೂರ್ನಿಯಲ್ಲಿ ಸೋಮವಾರ ಸುಲಭ ಜಯ ದಾಖಲಿಸಿದವು.

ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ, ಐನಂಡ ತಂಡವು ಚೇರಂಡ ವಿರುದ್ಧ 6-1 ಗೋಲುಗಳಿಂದ ಜಯ ಸಾಧಿಸಿದರೆ, ಮೇಕೆರಿರ ತಂಡದವರು ಕಾಂಗೀರ ತಂಡದವರನ್ನು 6-2 ಗೋಲುಗಳಿಂದ ಮಣಿಸಿದರು.

ಮುಕ್ಕಾಟಿರ (ಬೋಂದ) ತಂಡವು ವಸಂತ್ ಅವರ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಬಿದ್ದಾಟಂಡ ವಿರುದ್ಧ 4-0 ಅಂತರದಲ್ಲಿ ಜಯ ಗಳಿಸಿತು. 1–1ರ ಸಮಬಲ ಸಾಧಿಸಿದ ಐಚೆಟ್ಟಿರ ಮತ್ತು ಮಾರ್ತಂಡ ತಂಡಗಳಿಗೆ ನಂತರ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಐಚೆಟ್ಟಿರ ತಂಡವು 5 -4 ಅಂತರದಿಂದ ರೋಚಕ ಗೆಲುವು ಸಾಧಿಸಿತು.

ಫಲಿತಾಂಶ: ಬಿದ್ದಂಡ ತಂಡವು 3–1ರಿಂದ ಚೋಳಂಡ ವಿರುದ್ಧ; ಚೋಕಿರ 1–0ಯಿಂದ ಚೆಯ್ಯಂಡ ವಿರುದ್ಧ; ಕಂಬೇಯಂಡ  4–0ಯಿಂದ ಕೋಲುಮಾದಂಡ ವಿರುದ್ಧ; ಚಂಗೇಟಿರ 3–2ರಲ್ಲಿ ಮೊಳ್ಳೆರ ವಿರುದ್ಧ; ಕಾಂಡೇರ ತಂಡವು 3–0ಯಿಂದ ಮಾಣಿರ ವಿರುದ್ಧ; ಮಂದನೆರವಂಡ 5–0ಯಿಂದ ಕೋಲತಂಡ ವಿರುದ್ಧ; ಮುದ್ದಂಡ 1–0ಯಿಂದ ಮಾಚಂಡ ವಿರುದ್ಧ; ಮರುವಂಡ ತಂಡವು 4–0ಯಿಂದ ಪೋರಂಗಡ ವಿರುದ್ಧ; ಚೇಂದಿರ ತಂಡವು 2–1 ಮುಕ್ಕಾಟಿರ ವಿರುದ್ಧ; ಅಳಮೇಂಗಡ 4–0ರಿಂದ ಬಟ್ಟಿಯಂಡ ವಿರುದ್ಧ; ಚೌರಿರ (ಹೊದ್ದೂರು) ತಂಡವು 5 -0ಯಿಂದ ಅಯ್ಯನೆರವಂಡ ವಿರುದ್ಧ; ಕೊಳ್ಳಿರ ತಂಡವು 3- 2ರಿಂದ ಬೊಳಕಾರಂಡ ವಿರುದ್ಧ; ಮಲ್ಲಚ್ಚಿರ ತಂಡವು 2–1ರಿಂದ ಐತಿಚಂಡ ವಿರುದ್ದ; ಅಪ್ಪನೆರವಂಡ ತಂಡವು 2–0ಯಿಂದ ಪಾಲೆಂಗಡ ವಿರುದ್ಧ; ಚಂಗುಲಂಡ ತಂಡವು 4–0ಯಿಂದ ಪಾಲೆಯಂಡ ವಿರುದ್ಧ ಗೆಲುವು ಸಾಧಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT