ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂಟಿಕೊಪ್ಪ | ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಸಾವು

Published 26 ಮೇ 2024, 0:30 IST
Last Updated 26 ಮೇ 2024, 0:30 IST
ಅಕ್ಷರ ಗಾತ್ರ

ಸುಂಟಿಕೊಪ್ಪ (ಕೊಡಗು ಜಿಲ್ಲೆ): ಇಲ್ಲಿಗೆ ಸಮೀಪದ ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿಗೆ‌ ಸೇರಿದ ತೊಂಡೂರು ಗ್ರಾಮದ ಕಾಫಿತೋಟದಲ್ಲಿ ವಿದ್ಯುತ್ ಸ್ಪರ್ಶಿಸಿ 18 ವರ್ಷ ವಯಸ್ಸಿನ ಗಂಡಾನೆ ಶನಿವಾರ ಸ್ಥಳದಲ್ಲೇ ಮೃತಪಟ್ಟಿತು.

‘ರಘು ಎಂಬುವವರಿಗೆ ಸೇರಿದ ಕಾಫಿ ತೋಟದ ಬೇಲಿಗೆ ನೇರವಾಗಿ ವಿದ್ಯುತ್ ಸಂಪರ್ಕ ನೀಡಿದ್ದರಿಂದ ದುರ್ಘಟನೆ ನಡೆಯಿತು. ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರು ಪರಾರಿಯಾಗಿದ್ದಾರೆ’ ಎಂದು ಡಿಸಿಎಫ್ ಭಾಸ್ಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಥಳಕ್ಕೆ ಡಿಸಿಎಫ್‌ ಭಾಸ್ಕರ್, ಎಸಿಎಫ್ ಗೋಪಾಲ್, ಆರ್‌ಎಫ್‌ಓ ರತನ್, ಡಿಆರ್‌ಎಫ್ಓ ದೇವಯ್ಯ ಭೇಟಿ ನೀಡಿದ್ದರು.

ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ಮೃತಪಟ್ಟ ಕಾಡಾನೆಗಳ ಸಂಖ್ಯೆ 3ಕ್ಕೆ ಏರಿದೆ. ಶುಕ್ರವಾರ ಮತ್ತೊಂದು ಆನೆಯೊಂದಿಗೆ ಕಾದಾಡುವಾಗ ಒಂದು ಆನೆ, ಗಾಯಗೊಂಡಿದ್ದ ಮತ್ತೊಂದು ಆನೆ ಮೃತಪಟ್ಟಿತ್ತು‌.

ಸುಂಟಿಕೊಪ್ಪ ಸಮೀಪದ ತೊಂಡೂರು ಗ್ರಾಮದ ತೋಟದಲ್ಲಿ ಜಾಡಾನೆ ಮೃತಪಟ್ಟಿದೆ.
ಸುಂಟಿಕೊಪ್ಪ ಸಮೀಪದ ತೊಂಡೂರು ಗ್ರಾಮದ ತೋಟದಲ್ಲಿ ಜಾಡಾನೆ ಮೃತಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT