ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು | ಅಂಬಟ್ಟಿ ಮಖಾಂ ಉರೂಸ್‌ಗೆ ಚಾಲನೆ

Published 17 ಫೆಬ್ರುವರಿ 2024, 6:38 IST
Last Updated 17 ಫೆಬ್ರುವರಿ 2024, 6:38 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಶೇಕ್ ವಲಿಯುಲ್ಲಾಹಿ ಅವರ ಐದು ದಿನಗಳ ಅಂಬಟ್ಟಿ ಮಖಾಂ ಉರುಸ್‌ಗೆ ಶುಕ್ರವಾರ ಚಾಲನೆ ದೊರೆಯಿತು.  ಫೆ.20ವರೆಗೆ ನಡೆಯಲಿದೆ.

ಮಖಾಂ ಆವರಣದಲ್ಲಿ ಅಂಬಟ್ಟಿ ಜಮಾತಿನ ಅಧ್ಯಕ್ಷ ಎ.ಎಚ್. ಶಾದುಲಿ ಅಧ್ಯಕ್ಷತೆ ವಹಿಸಿ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು. ಜುಮ್ಮಾ ಮಸೀದಿಯ ಖತೀಬ ರಫೀಕ್ ಸಅದಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.

 ಉಪಾಧ್ಯಕ್ಷ ಎಂ.ಕೆ.ಹ್ಯಾರಿಸ್, ಕೋಶಾಧಿಕಾರಿ ಖಾಲಿದ್ ಫೈಜಿ, ಆಯೋಜಕ ಸಮಿತಿ ಅಧ್ಯಕ್ಷ ಎಚ್.ತೌಸೀಫ್, ಕಾರ್ಯದರ್ಶಿ ಜುಬೇರ್ ಅಹಮದ್, ಪ್ರಮುಖರಾದ ಕೆ.ಎ.ಯುಸೂಫ್,  ಎಂ.ಕೆ.ಮುಸ್ತಫ, ಪದಾಧಿಕಾರಿಗಳಾದ ಪಿ. ಎ. ಖಾಲಿದ್, ರಜಾಕ್, ಹುಸೇನಾರ್, ಸುಹೀರ್, ಸದರ್ ಉಸ್ತಾದ್ ಅಶ್ರಫ್ ಹಳ್ರಮಿ ಭಾಗವಹಿಸಿದ್ದರು.

 ವಿದ್ಯುತ್ ದೀಪ ಹಾಗೂ ಹೂಹಾರಗಳ ಅಲಂಕೃತ ಮಖಾಂನಲ್ಲಿ ಸಂದಲ್ ಕಾರ್ಯಕ್ರಮ ಸಂಜೆ ವಿಜೃಂಭಣೆಯಿಂದ ಜರುಗಿತು.

ಅಲಂಕೃತ ಅಂಬಟ್ಟಿ ಮಖಾಂನಲ್ಲಿ ನಡೆದ ಸಂದಲ್ ಕಾರ್ಯಕ್ರಮ.
ಅಲಂಕೃತ ಅಂಬಟ್ಟಿ ಮಖಾಂನಲ್ಲಿ ನಡೆದ ಸಂದಲ್ ಕಾರ್ಯಕ್ರಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT