ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು: ಕೇರಳ ಗಡಿಭಾಗ ಕರಿಕೆಯಲ್ಲಿ ‘ಗಡಿ ಉತ್ಸವ’ ಆರಂಭ

Published 27 ಜನವರಿ 2024, 7:16 IST
Last Updated 27 ಜನವರಿ 2024, 7:16 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಕೇರಳ ಗಡಿಭಾಗವಾದ ಕರಿಕೆ ಗ್ರಾಮದಲ್ಲಿ ಶನಿವಾರ ‘ಗಡಿ ಉತ್ಸವ’ದ ಅಂಗವಾಗಿ ಮೆರವಣಿಗೆ ಆರಂಭವಾಗಿದೆ.

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕ, ಮಡಿಕೇರಿ ತಾಲ್ಲೂಕು ಘಟಕ, ಭಾಗಮಂಡಲ ಹೋಬಳಿ ಘಟಕ ಹಾಗೂ ಕರಿಕೆ ಗ್ರಾಮ ಪಂಚಾಯಿತಿ ವತಿಯಿಂದ ಈ ಉತ್ಸವ ನಡೆಯುತ್ತಿದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.

ಕನ್ನಡ ಧ್ವಜಗಳನ್ನು ಹಿಡಿದು ವಿದ್ಯಾರ್ಥಿಗಳು, ಸಾರ್ವಜನಿಕರು ಕೆಎನ್‌ಎಂ ಶಾಲೆಯಿಂದ ಎಳ್ಳುಕೊಚ್ಚಿಯವರೆಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ.

ಪಾಣತ್ತೂರು, ಕೇರಳದ ಕಾಸರಗೋಡು, ನೀಲೇಶ್ವರಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಉತ್ಸವ ನಡೆಯುವ ಕರಿಕೆಯ ಎಳ್ಳುಕೊಚ್ಚಿ– ಬೇಕಲ್ ಉಗ್ಗಪ್ಪ ನಗರದಲ್ಲಿ ಸೇರಿದ್ದಾರೆ.

ಗ್ರಾಮದ ರಸ್ತೆಗಳಲ್ಲಿ ಕನ್ನಡದ ಬಾವುಟಗಳನ್ನು ಕಟ್ಟಲಾಗಿದೆ. ಪ್ರಮುಖ ರಸ್ತೆಗಳನ್ನು ಹಾಗೂ ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT