ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಕೇರಿ: ತಡೆಗೋಡೆ ಕುಸಿತ

Published 23 ಮೇ 2024, 4:18 IST
Last Updated 23 ಮೇ 2024, 4:18 IST
ಅಕ್ಷರ ಗಾತ್ರ

ನಾಪೋಕ್ಲು: ಸಮೀಪದ ಕೊಳಕೇರಿ ಗ್ರಾಮದ ಕಾಂಡಂಡ ಚರ್ಮಣ ಎಂಬುವರ ಮನೆಯ ತಡೆಗೋಡೆ ಮಳೆಯಿಂದಾಗಿ ಕುಸಿದು ತೀವ್ರ ನಷ್ಟ ಸಂಭವಿಸಿದೆ.

ಈ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಬಿರುಸಿನ ಮಳೆ ಸುರಿದಿತ್ತು. ಚರ್ಮಣ ಈಚೆಗೆ ಮನೆಗೆ ತಡೆಗೋಡೆ ನಿರ್ಮಿಸಿದ್ದರು. ತಡೆಗೋಡೆ ಸಂಪೂರ್ಣ ಕುಸಿದು ಬಿದ್ದಿದ್ದು ಅಪಾರ ನಷ್ಟ ಸಂಭವಿಸಿದೆ. ತಡೆಗೋಡೆಯ ಅಲ್ಪ ಭಾಗವನ್ನು ವಿದ್ಯುತ್ ಕಂಬ ತಡೆದಿದ್ದು ನಾಪೋಕ್ಲು - ಕಕ್ಕಬೆ ಮುಖ್ಯ ರಸ್ತೆಗೆ ಬೀಳುವ ಮಣ್ಣನ್ನು ತಡೆಹಿಡಿದ ಕಾರಣ ಇನ್ನಷ್ಟು ಸಮಸ್ಯೆ ತಪ್ಪಿದೆ.

ನಾಪೋಕ್ಲು ವ್ಯಾಪ್ತಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಹೊಳೆ-ತೋಡುಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಕೊಳಕೇರಿ ಗ್ರಾಮಕ್ಕೆ ನಾಪೋಕ್ಲು ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT