ಮೂರ್ನಾಡು: ಮದರಸ ಉದ್ಘಾಟನೆ

7

ಮೂರ್ನಾಡು: ಮದರಸ ಉದ್ಘಾಟನೆ

Published:
Updated:
Deccan Herald

ಚೆಟ್ಟಳ್ಳಿ: ಮಡಿಕೇರಿ ತಾಲ್ಲೂಕಿನ ಮೂರ್ನಾಡು ಗ್ರಾಮದಲ್ಲಿ ಮರು ನಿರ್ಮಾಣ ಆಗಿರುವ ಮದರಸವನ್ನು ಈಚೆಗೆ ಉದ್ಘಾಟಿಸಲಾಯಿತು. ಪಾಣಕ್ಕಾಡ್ ಸೈಯದ್‌ ಅಬ್ಬಾಸಲಿ ಶಿಯಾಬ್ ಅವರು ಉದ್ಘಾಟಿಸಿದರು.

ನಂತರ ಮಾತನಾಡಿ, ಮದರಸಗಳು ಜಿಲ್ಲೆಯಲ್ಲಿ ಶಾಂತಿ ಹಾಗೂ ಸೌಹಾರ್ದದ ಸಂಕೇತವಾಗಿ ನಿಂತಿವೆ ಎಂದು ಹೇಳಿದರು.

ಜಮಾಹತ್‌ ಅಧ್ಯಕ್ಷ ಮಜೀದ್ ಅಧ್ಯಕ್ಷತೆ ವಹಿಸಿದ್ದರು. ಮಹಮ್ಮದ್‌ ತುರಾಬ್ ಅಸ್ಸಖಾಫ್ ತಂಗಲ್, ಫೀರ್ ಮಹಮ್ಮದ್‌ ರಜಬ್ ಅಲಿಖಾನ್ ಮತ್ತಿತರರು ಹಾಜರಿದ್ದರು.

ಜಿಲ್ಲೆಯ ಅತ್ಯುತ್ತಮ ಪ್ರೌಢಶಾಲಾ ಶಿಕ್ಷಕರ ಪ್ರಶಸ್ತಿಗೆ ಭಾಜನರಾದ ಹಾಕತ್ತೂರು ಪ್ರೌಢಶಾಲಾ ಶಿಕ್ಷಕರಾದ ಮುನೀರ್ ಮಾಸ್ಟರ್ ಮೂರ್ನಾಡು ಅವರನ್ನು ಸನ್ಮಾನಿಸಲಾಯಿತು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !