ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿಗೃಹದಲ್ಲಿ ಪುರುಷ, ಮಹಿಳೆ ಆತ್ಮಹತ್ಯೆ

Published 27 ಮಾರ್ಚ್ 2024, 16:34 IST
Last Updated 27 ಮಾರ್ಚ್ 2024, 16:34 IST
ಅಕ್ಷರ ಗಾತ್ರ

ಸೋಮವಾರಪೇಟೆ (ಕೊಡಗು ಜಿಲ್ಲೆ): ಪಟ್ಟಣದ ವಸತಿ ಗೃಹವೊಂದರಲ್ಲಿ ತೆಲಂಗಾಣ ರಾಜ್ಯದ ಮೇದಾಪುರಪು ರಾಜು (55) ಮತ್ತು ಮೇದಾಪುರಪು ಸ್ವಾತಿ (54) ಎಂಬುವವರು ಬುಧವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಮೇಲ್ನೋಟಕ್ಕೆ ಇವರಿಬ್ಬರು ಪತಿ, ಪತ್ನಿ ಎಂದು ಕಂಡು ಬಂದಿದೆ. ಆದರೆ, ಇನ್ನೂ ಖಚಿತವಾಗಿಲ್ಲ. ಜ. 4ರಿಂದಲೂ ಇದೇ ವಸತಿಗೃಹದಲ್ಲಿ ಇವರು ಆಗಾಗ್ಗೆ ಬಂದು ತಂಗುತ್ತಿದ್ದರು. ಕೋಣೆಯಲ್ಲಿ ಹೆಚ್ಚಿನ ಪ್ರಮಾಣದ ಔಷಧಿಗಳು ಸಿಕ್ಕಿವೆ. ಯಾವುದಾದರೂ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರಬಹುದು ಎಂದು ಅನ್ನಿಸುತ್ತಿದೆ. ಒಂದೇ ಹಗ್ಗಕ್ಕೆ ಇವರು ನೇಣು ಹಾಕಿಕೊಂಡಿದ್ದಾರೆ. ಇವರ ಸಂಬಂಧಿಕರ ಹುಡುಕಾಟ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಸೋಮವಾರಪೇಟೆ ಪಟ್ಟಣ ಸಬ್‌ಇನ್‌ಸ್ಪೆಕ್ಟರ್ ವಸಂತ್‌ ಹಾಗೂ ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT