ಎ.ವಿ ಶಾಲೆಯಲ್ಲಿ ದಂತ ತಪಾಸಣಾ ಶಿಬಿರ

7

ಎ.ವಿ ಶಾಲೆಯಲ್ಲಿ ದಂತ ತಪಾಸಣಾ ಶಿಬಿರ

Published:
Updated:
Prajavani

ಮಡಿಕೇರಿ: ಅಶ್ವಿನಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ದಂತ ತಪಾಸಣೆ ಶಿಬಿರವು ನಗರದ ಮಹದೇವಪೇಟೆಯ ಎ.ವಿ. ಶಾಲೆಯಲ್ಲಿ ಬುಧವಾರ ನಡೆಯಿತು.

ಶಿಬಿರದಲ್ಲಿ ಹಿಂದೂಸ್ತಾನಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಮೈಸೂರು ರಸ್ತೆಯಲ್ಲಿರುವ ಶಾಲೆಯ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಗರಸಭೆ ಸದಸ್ಯೆ ಸವಿತಾ ರಾಕೇಶ್, ‘ಆರೋಗ್ಯ ಚೆನ್ನಾಗಿ ಇರಬೇಕಾದರೆ ಹಲ್ಲಿನ ಆರೋಗ್ಯ ಮೊದಲು ಸರಿಯಿರಬೇಕು. ಹಲ್ಲುಗಳು ಸರಿಯಾಗಿದ್ದಾಗ ಎಲ್ಲ ಬಗೆಯ ಆಹಾರ ಸೇವಿಸಲು ಸಾಧ್ಯವಾಗುತ್ತದೆ' ಎಂದು ಹೇಳಿದರು.

ಆರೋಗ್ಯಕ್ಕೆ ಹಲ್ಲುಗಳ ಪಾತ್ರಮುಖ್ಯ. ಮಕ್ಕಳು ಸಿಹಿ ಪದಾರ್ಥಗಳನ್ನು ಹೆಚ್ಚು ತಿನ್ನುವುದರಿಂದ ವಿಶೇಷ ಕಾಳಜಿ ವಹಿಸಬೇಕಿದೆ ಎಂದು ಸಲಹೆ ಮಾಡಿದರು.

ನಗರಸಭೆ ಸದಸ್ಯೆ ಅನಿತಾ ಪೂವಯ್ಯ ಮಾತನಾಡಿ, ದಂತ ಚಿಕಿತ್ಸೆಯು ಹೆಚ್ಚು ದುಬಾರಿಯಾಗಿದ್ದು, ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಪಡೆದುಳ್ಳಲು ಸಾಧ್ಯವಾಗುವುದಿಲ್ಲ. ಉಚಿತ ಶಿಬಿರವನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಹಲ್ಲುಗಳ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಹೇಳಿದರು.

ಮಕ್ಕಳಲ್ಲಿ ಹಲ್ಲುಗಳಲ್ಲಿ ಸಮಸ್ಯೆ ಕಂಡುಬಂದಲ್ಲಿ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಈ ಬಗ್ಗೆ ಪೋಷಕರು ಕಾಳಜಿ ವಹಿಸಬೇಕು ಎಂದು ಹೇಳಿದರು.

ಅಶ್ವಿನಿ ಆಸ್ಪತ್ರೆಯ ವೈದ್ಯೆ ಡಾ.ಅರ್ಪಿತಾ ಮಾತನಾಡಿ, ವಿದ್ಯಾರ್ಥಿಗಳಿಗೆ ಹಲ್ಲುಗಳ ಸ್ಪಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು.

ದಂತ ವೈದ್ಯ ಡಾ.ಮ್ಯಾಥ್ಯು, ನಗರಸಭೆ ಸದಸ್ಯೆ ಲೀಲಾ ಶೇಷಮ್ಮ, ಪ್ರಫುಲ್ಲ ದೇವರಾಜ್, ಶಿಕ್ಷಕ ಕೇಶವ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !