ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂಟಿಕೊಪ್ಪ | ಮುಕ್ತ ವಾಲಿವಾಲ್; ಮಳೂರು ತಂಡಕ್ಕೆ ಪ್ರಶಸ್ತಿ

Published 27 ಫೆಬ್ರುವರಿ 2024, 15:45 IST
Last Updated 27 ಫೆಬ್ರುವರಿ 2024, 15:45 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ನಾಕೂರು ಕಾನ್ ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‌ನಿಂದ ನಡೆದ ಕಾನ್‌ಬೈಲ್ ಶಾಲಾ ಮೈದಾನದಲ್ಲಿ ನಡೆದ 24ನೇ ವರ್ಷದ ಕ್ರೀಡೋತ್ಸವದ ಪುರುಷರ ಮುಕ್ತ ವಾಲಿಬಾಲ್ ಟೂರ್ನಿಯಲ್ಲಿ ವೈ.ಬಿ.ಸಿ ಅಭಿ ಫ್ರೆಂಡ್ಸ್ ಪ್ರಥಮ ಸ್ಥಾನ ಪಡೆದರೆ, ಕುಶಾಲನಗರದ ಬಿಲಾಲ್ ಫ್ರೆಂಡ್ಸ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಬಹು ಪೈಪೋಟಿಯಿದ ಕೂಡಿದ ವಾಲಿಬಾಲ್ ಟೂರ್ನಿ ಪ್ರೇಕ್ಷಕರನ್ನು ಕ್ಷಣ ಕ್ಷಣಕ್ಕೂ ತುದಿಗಾಲಿನಲ್ಲಿ ನಿಲ್ಲಿಸಿತು. ಮೊದಲ ಸುತ್ತಿನಲ್ಲಿ ಮಳೂರು ತಂಡ 15-11 ಅಂಕಗಳಿಂದ ಮುನ್ನಡೆ ಪಡೆದರೆ, ದ್ಚಿತೀಯ ಸುತ್ತಿನಲ್ಲಿ ಬಿಲಾಲ್ ಪ್ರೆಂಡ್ಸ್ ತಂಡ ಮಳೂರು ತಂಡದ ವಿರುದ್ಧ 15-13 ಅಂಕಗಳಿಂದ ಸಮಬಲ ಸಾಧಿಸಿತು.

ಕೊನೆಯ ಸುತ್ತಿನ ರೋಚಕ ಪಂದ್ಯದಲ್ಲಿ ಅಭಿ ಮಳೂರು ತಂಡ‌ 15-12 ಅಂಕಗಳಿಂದ ಜಯ ಗಳಿಸಿ ಗೆಲುವಿನ ನಗೆ ಬೀರಿತು. ಈ ಪಂದ್ಯದಲ್ಲಿ ತೃತೀಯ ಸ್ಥಾನವನ್ನು ಸಂತೋಷ್ ತಂಡ ಪಡೆದುಕೊಂಡಿತು.

ಉಳಿದ ಪಂದ್ಯ ವಿಜೇತರ ವಿವರ

ಪುರುಷರ ಹಗ್ಗಜಗ್ಗಾಟ ಟಿಂಬರ್ ಬಾಯ್ಸ್ ‘ಎ’ (ಪ್ರ), ಟಿಂಬರ್ ಬಾಯ್ಸ್ ‘ಬಿ’ (ದ್ವಿ).

ಮಹಿಳೆಯರ ಹಗ್ಗ ಜಗ್ಗಾಟ: ಸೀಮಾ ಫ್ರೆಂಡ್ಸ್ (ಪ್ರ), ಲೀಲಾವತಿ ಫ್ರೆಂಡ್ಸ್ ( ದ್ವಿ).

ಸಾರ್ವಜನಿಕರ ರಸ್ತೆ ಓಟ; ಸೃಜನ್ ಮಂಜಿಕೆರೆ (ಪ್ರ), ಕವನ್ ಕಲ್ಲೂರು (ದ್ವಿ), ಮಣಿ (ತೃ).

ಮಕ್ಕಳ ಕಬಡ್ಡಿ: ಸೆವೆನ್ ಸ್ಟಾರ್ (ಪ್ರ).

ರಾಯಲ್ ಅಫೀಸಿಯಲ್ (ದ್ವಿ).

ಪುರುಷರ ಕಬಡ್ಡಿ: ಎಫ್.ವೈ.ಸಿ ‘ಎ’ (ಪ್ರ), ಎಫ್‌ವೈಸಿ ‘ಬಿ’ (ದ್ವಿ).

ಮಹಿಳೆಯರ ಥ್ರೋಬಾಲ್: ಕಾವೇರಿ ಸಮುದಾಯ ಸಂಘ (ಪ್ರ), ಎಫ್.ವೈ.ಸಿ ಮಹಿಳಾ ಸಂಘ (ದ್ವಿ).

ಬಾಂಬ್ ಇನ್ ಸಿಟಿ: ನೀತು (ಪ್ರ), ಬೀನಾ ಬಾರಿಕೆ (ದ್ವಿ).

ಪಾಸಿಂಗ್ ದ ಬಾಲ್; ವಾಣಿ (ಪ್ರ), ರಮ್ಯ (ದ್ವಿ).

ಮಕ್ಕಳ ರಸ್ತೆ ಓಟ: ನಿಖಿಲ್ ಗೌಡ ಕಲ್ಲೂರು (ಪ್ರ), ತನುಷ್ ಮಂಜಿಕೆರೆ (ದ್ವಿ), ಜಗನ್ ಕೊಳಂಬೆ (ತೃ) ಸ್ಥಾನ ಪಡೆದರು.

ಹಾಗೆಯೇ ಮಕ್ಕಳಿಗೆ ಕಾಳು ಹೆಕ್ಕುವುದು, ಗೋಣಿ ಚೀಲ ಓಟ, ಕಪ್ಪೆ ಜಿಗಿತ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳು ಅತಿಥಿಗಳಿಂದ ಬಹುಮಾನ ಸ್ವೀಕರಿದರು.

ಸಂಘದ ಅಧ್ಯಕ್ಷ ಬಿ.ಎ.ವಸಂತ, ಕಾರ್ಯದರ್ಶಿ ಶಂಕರನಾರಾಯಣ, ಉಪಾಧ್ಯಕ್ಷ ಟಿ.ಕೆ.ಚಂದ್ರು, ಖಜಾಂಚಿ ಕೆ.ಎಸ್.ವಿನೋದ್, ಸಹಕಾರ್ಯದರ್ಶಿ ಎಚ್.ಎಂ.ಹರೀಶ್, ಕ್ರೀಡಾ ಕಾರ್ಯದರ್ಶಿಗಳಾದ ದೇವೇಂದ್ರ, ವಿಜೇಶ್, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಪ್ರವೀಣ್ ಕುಮಾರ್, ದಿನೇಶ್ ಸೇರಿದಂತೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT