ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಡಾನೆ ಸೆರೆಗೆ ಸಿಕ್ಕಿದ ಅನುಮತಿ; ಕಾರ್ಯಾಚರಣೆ ಆರಂಭ

ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಭಾಗದಲ್ಲಿ ಆತಂಕ ಮೂಡಿಸಿರುವ ಆನೆ
Published 4 ಏಪ್ರಿಲ್ 2024, 5:52 IST
Last Updated 4 ಏಪ್ರಿಲ್ 2024, 5:52 IST
ಅಕ್ಷರ ಗಾತ್ರ

ಸೋಮವಾರಪೇಟೆ: ತಾಲ್ಲೂಕಿನ ಶನಿವಾರಸಂತೆ ಅರಣ್ಯ ಇಲಾಖಾ ವ್ಯಾಪ್ತಿಯಲ್ಲಿ ಇನ್ನಿಲ್ಲದಂತೆ ಕಾಡುತ್ತಿದ್ದ ಕಾಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಮುಂದಾಗಿದ್ದು, 2 ದಿನಗಳಿಂದ ಕಾಡಾನೆಯ ಚಲನವಲನವನ್ನು ಅರಣ್ಯಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಈಚೆಗೆ ಒಬ್ಬರನ್ನು ಹತ್ಯೆ ಮಾಡಿದ್ದ ಕಾಡಾನೆಯನ್ನು ಸೆರೆ ಹಿಡಿಯಲು ಶನಿವಾರಸಂತೆ ಅರಣ್ಯ ಇಲಾಖೆಗೆ ಮೇಲಾಧಿಕಾರಿಗಳಿಂದ ಅನುಮತಿ ಸಿಕ್ಕಿದ್ದು, ಅರಣ್ಯ ಅಧಿಕಾರಿಗಳ ತಂಡ ಕಾರ್ಯಚರಣೆ ಪ್ರಾರಂಭಿಸಿದೆ.

ಡಿಸಿಎಫ್ ಭಾಸ್ಕರ್ ಅವರ ನಿರ್ದೇಶನದಂತೆ ಎಸಿಫ್ ಗೋಪಾಲ್ ಅವರ ಮಾರ್ಗದರ್ಶನದಲ್ಲಿ ಶನಿವಾರಸಂತೆ ಆರ್‌ಎಫ್ಒ ಗಾನವಿ ಅವರ ನೇತ್ರತ್ವದಲ್ಲಿ ಕುಶಾಲನಗರ ಟಾಸ್ಕ್ ಫೋರ್ಸ್‌ನ ನಾಲ್ವರು ಸಿಬ್ಬಂದಿಯು ಕಾಡಾನೆ ಮಾಲಂಬಿ ಅರಣ್ಯದಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ. ಗುರುವಾರ ಕಾರ್ಯಚರಣೆ ಮುಂದುವರಿಯಲಿದೆ.

‘ಆಲೂರು, ಬಾಣಾವಾರ, ದೊಡ್ಡಳ್ಳಿ, ಕಣಗಾಲು, ಕಂತೆಬಸನಳ್ಳಿ, ಕೂಡುರಸ್ತೆ ಗ್ರಾಮಗಳಲ್ಲಿ ಕಾಡಾನೆ ಓಡಾಟವಿರುವುದರಿಂದ ಗ್ರಾಮ ನಿವಾಸಿಗಳು ಬೆಳಿಗ್ಗೆ 7 ಗಂಟೆಯವರೆಗೆ ಹೊರ ಹೋಗಬಾರದು’ ಎಂದು ಆರ್‌ಎಫ್ಒ ಗಾನವಿ ಮನವಿ ಮಾಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಸಿಎಫ್ ಭಾಸ್ಕರ್, ‘ಒಂದು ಕಾಡಾನೆ ಸೆರೆಗೆ ಅನುಮತಿ ಸಿಕ್ಕಿದೆ. ಆದರೆ, ಈ ಕಾಡನೆಯೂ ಅತ್ಯಂತ ವೇಗವಾಗಿ ಓಡಾಡುತ್ತಿದೆ. ಇದನ್ನು ಪತ್ತೆ ಹಚ್ಚುವುದೇ ತ್ರಾಸದಾಯಕವಾಗಿದೆ. ಇದರ ಗುರುತು ಪತ್ತೆಯಾದ ಕೂಡಲೇ ಸಾಕಾನೆಗಳನ್ನು ಸ್ಥಳಕ್ಕೆ ಕರೆಸಲಾಗುವುದು’ ಎಂದು ತಿಳಿಸಿದರು.

ಹೊಸಗುತ್ತಿ ಗ್ರಾಮದ ಕೃಷಿಕ ಜಗದೀಶ್ (49) ಅವರು ಭಾನುವಾರ ಬೆಳಿಗ್ಗೆ ಕಾಡಾನೆಯೊಂದರ ದಾಳಿಗೆ ಸಿಲುಕಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT